ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕರ್ನಾಟಕದ ನಾಲ್ವರ ನಾಮನಿರ್ದೇಶನ

BREAKING NEWS, Kannada News, National No Comments on ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕರ್ನಾಟಕದ ನಾಲ್ವರ ನಾಮನಿರ್ದೇಶನ 25

ಬೆಳಗಾವಿ: ಕೇಂದ್ರ ಸಾಹಿತ್ಯ ಅಕಾಡೆಮಿಗೆ ಸದಸ್ಯರನ್ನಾಗಿ ಬೆಳಗಾವಿಯ ಅಥಣಿಯ ಸೃಜನಶೀಲ ಲೇಖಕ ಬಾಳಾಸಾಹೇಬ ಲೋಕಾಪುರ ಅವರು ಸೇರಿದಂತೆ ನಾಲ್ವರನ್ನು ನಾಮನಿರ್ದೇಶನ ಮಾಡಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಕನ್ನಡ ಭಾಷಾ ವಿಭಾಗದಿಂದ ದಲಿತ ಕವಿ ಸಿದ್ಧಲಿಂಗಯ್ಯ, ಸರಜೂ ಕಾಟ್ಕರ್ ಮತ್ತು ಪ್ರೊ.ಬಾಳಾಸಾಹೇಬ ಲೊಕಾಪುರ ಸೇರಿ ಮೂವರು ಆಯ್ಕೆಯಾಗಿದ್ದರೆ. ಕರ್ನಾಟಕದವರೇ ಆದ ಮಧ್ಯಪ್ರದೇಶದ ಅಮರಕಂಟಕ ಎಂಬಲ್ಲಿನ ಇಂದಿರಾಗಾಂಧಿ ಬುಡಕಟ್ಟು ವಿವಿ ಕುಲಪತಿ, ಧಾರವಾಡದ ಡಾ.ತೇಜಸ್ವಿ ಕಟ್ಟಿಮನಿ ಅವರು ಹಿಂದಿ ಭಾಷೆಯ ವಿಭಾಗದಿಂದ ಆಯ್ಕೆಯಾಗಿದ್ದಾರೆ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದ ನಾಲ್ವರು ಸಾಹಿತಿಗಳು ರಾಜ್ಯವನ್ನು ಪ್ರತಿನಿದಿಸಿದಂತಾಗಿದೆ.

Related Articles

Leave a comment

Back to Top

© 2015 - 2017. All Rights Reserved.