2017 ಮಿಸ್ ಇಂಡಿಯಾ ಸೂಪರ್ ಮಾಡಲ್ ಪ್ರಶಸ್ತಿ ಮುಡಿಗೇರಿಸಿಕೊಂಡ ಪುಟ್ಟಗೌರಿ ಖ್ಯಾತಿಯ ನಟಿ

Entertainment, Kannada News No Comments on 2017 ಮಿಸ್ ಇಂಡಿಯಾ ಸೂಪರ್ ಮಾಡಲ್ ಪ್ರಶಸ್ತಿ ಮುಡಿಗೇರಿಸಿಕೊಂಡ ಪುಟ್ಟಗೌರಿ ಖ್ಯಾತಿಯ ನಟಿ 86

ಬೆಂಗಳೂರು: ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ಹೆಚ್ಚು ಜನಪ್ರಿಯತೆ ಹೊಂದಿರುವ ನಟಿ ರಂಜನಿ ರಾಘವನ್ ಇದೀಗ 2017ನೇ ಸಾಲಿನ ಮಿಸ್ ಇಂಡಿಯಾ  ಸೂಪರ್ ಮಾಡಲ್ ಸ್ಪರ್ಧೆಗೆ ಸ್ಪರ್ಧಿಸಿ ಪ್ರಶಸ್ತಿ ಜಯಿಸಿ ಮತ್ತೊಂದು ಕೀರ್ತಿಗೆ ಭಾಜನರಾಗಿದ್ದಾರೆ.

ಅವರ ಫೇಸ್ ಬುಕ್ ಫ್ಯಾನ್ಸ್ ಪೇಜ್ ನಲ್ಲಿ ಈ ಸುದ್ದಿ ಮತ್ತು ಫೋಟೋಗಳು ಹರಿದಾಡುತ್ತಿದ್ದು, ಫೇಸ್ ಬುಕ್ ನಲ್ಲಿರುವಂತೆ ಸಿಲ್ವರ್ ಸ್ಟಾರ್ ಫಿಲ್ಮ್ ಮೇಕರ್ಸ್ ಸ್ಕೂಲ್ ಆಫ್ ಫ್ಯಾಷನ್ ವತಿಯಿಂದ ಆಯೋಜಿತವಾಗಿದ್ದ ‘ಮಿಸ್ಟರ್ ಅಂಡ್ ಮಿಸ್ ಸೂಪರ್ ಮಾಡೆಲ್ 2017’ರಲ್ಲಿ ಭಾಗವಹಿಸಿದ್ದ ರಂಜನಿ ರಾಘವನ್ ಮಹಿಳಾ ವಿಭಾಗದ ಮೊದಲ ಸ್ಥಾನದಲ್ಲಿ ಗೆದ್ದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇತ್ತೀಚಿಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಈ ಸ್ಫರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಹಲವು ಮಾಡೆಲ್ ಗಳು ಭಾಗವಹಿಸಿದ್ದರು. ಈ ಪೈಕಿ ಕರ್ನಾಟಕದ ರಂಜನಿ ರಾಘವನ್ ಮಿಸ್ ಇಂಡಿಯಾ ಸೂಪರ್ ಮಾಡೆಲ್ 2017 ಅವಾರ್ಡ್ ಅನ್ನು ಗೆಲ್ಲುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

Related Articles

Leave a comment

Back to Top

© 2015 - 2017. All Rights Reserved.