ಗ್ರಾಮಗಳ ಅಭಿವೃದ್ಧಿಗಾಗಿ ಗ್ರಾಮಸಭೆ ನಡೆಸಿದ ಶಾಸಕ ಜಿ.ಟಿ ದೇವೇಗೌಡ

Kannada News, Regional No Comments on ಗ್ರಾಮಗಳ ಅಭಿವೃದ್ಧಿಗಾಗಿ ಗ್ರಾಮಸಭೆ ನಡೆಸಿದ ಶಾಸಕ ಜಿ.ಟಿ ದೇವೇಗೌಡ 45

ಮೈಸೂರು: ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ಗ್ರಾಮ ವಿಕಾಸ ಯೋಜನೆಯಡಿ 2017-18ನೇ ಸಾಲಿನಲ್ಲಿ ಕೆ.ಮಾದಹಳ್ಳಿ, ದೂರ, ಅನಗನಹಳ್ಳಿ ಮತ್ತು ಬೆಳವಾಡಿ ಗ್ರಾಮಗಳನ್ನು ಆಯ್ಕೆ ಮಾಡಿದ್ದು, ಈ ಯೋಜನೆಯಡಿ ಪ್ರತಿ ಗ್ರಾಮಕ್ಕೆ ಒಂದು ಕೋಟಿ ಹಣವನ್ನು ಬಿಡುಗಡೆ ಮಾಡಿರುವುದಾಗಿ ಶಾಸಕ ಜಿ.ಟಿ ದೇವೇಗೌಡ ಅವರು ತಿಳಿಸಿದರು.

ಕೆ.ಮಾದಹಳ್ಳಿ, ಅನಗನಹಳ್ಳಿ, ದೂರ ಗ್ರಾಮಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ, ಕಾಮಗಾರಿಗಳನ್ನು ಆಯ್ಕೆ ಮಾಡಲಾಯಿತು.

ಒಂದು ಕೋಟಿ ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ 50 ಲಕ್ಷ (ಇದರಲ್ಲಿ ಎಸ್.ಸಿ. 8.60ಲಕ್ಷ, ಎಸ್.ಟಿ. 3.50 ಲಕ್ಷ), ಗ್ರಂಥಾಲಯ ನಿರ್ಮಾಣಕ್ಕೆ 12 ಲಕ್ಷ, ಸಭಾಭವನ ನಿರ್ಮಾಣಕ್ಕೆ 12 ಲಕ್ಷ, ದೇವಸ್ಥಾನ ನಿರ್ಮಾಣಕ್ಕೆ 6, ಸೌರ ದೀಪಗಳನ್ನು ಅಳವಡಿಸಲು 3 ಲಕ್ಷ, ಆಧುನಿಕ ತಿಪ್ಪೇಗುಂಡಿಗಳ ನಿರ್ಮಾಣಕ್ಕೆ 10 ಲಕ್ಷ, ಪ್ಲೆಕ್ಸಿಬಲ್ ಪಂಡ್ 5 ಲಕ್ಷ ಹಾಗೂ ಗ್ರಾಮ ಪಂಚಾಯಿತಿ ನಡವಳಿಯನ್ನು ಟೆಲಿವಿಷನ್ ಮೂಲಕ ನೇರ ಪ್ರಸಾರ ಮಾಡಲು 2 ಲಕ್ಷ ಹಣವನ್ನು ನಿಗದಿಪಡಿಸಲಾಗಿ ಎಂದು ಜಿಟಿಡಿ ತಿಳಿಸಿದರು.

ಇನ್ನು ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ತಾ.ಪಂ. ಇ.ಓ. ಲಿಂಗರಾಜಯ್ಯ, 2017-18ನೇ ಸಾಲಿನ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿ ಚಾಮುಂಡೇಶ್ವರಿ ಕ್ಷೇತ್ರದಿಂದ ಶಾಸಕರು ಜಿ.ಟಿ.ದೇವೇಗೌಡರು ಕೆ.ಮಾದಹಳ್ಳಿ, ದೂರ, ಅನಗನಹಳ್ಳಿ ಮತ್ತು ಬೆಳವಾಡಿ ಗ್ರಾಮಗಳನ್ನು ಆಯ್ಕೆ ಮಾಡಿದ್ದು, ಗ್ರಾಮ ಸಭೆಗಳನ್ನು ಶಾಸಕರ ಅಧ್ಯಕ್ಷತೆಯಲ್ಲಿ ನಡೆಸಿ ಕ್ರಿಯಾ ಯೋಜನೆಯನ್ನು ತಯಾರಿಸಬೇಕು ಎಂದು ಸಭೆಗೆ ತಿಳಿಸಿದರು.

ಇದಕ್ಕು ಮೊದಲು ಕುಮಾರು ಬೀಡು ಗ್ರಾಮದಲ್ಲಿ 22.00 ಲಕ್ಷ ವೆಚ್ಚದಲ್ಲಿ ವಾಲ್ಮಿಕಿ ಸಮುದಾಯ ಭವನದ ಗುದ್ದಲಿ ಪೂಜೆಯನ್ನು ಶಾಸಕ ಜಿ.ಟಿ ದೇವೇಗೌಡರು ನೆರವೇರಿಸಿದರು.

Related Articles

Leave a comment

Back to Top

© 2015 - 2017. All Rights Reserved.