ದೀಪಕ್ ರಾವ್ ಹತ್ಯೆ ದಿನ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಬಶೀರ್ ಸಾವು

BREAKING NEWS, Crime, Kannada News, Regional, Top News No Comments on ದೀಪಕ್ ರಾವ್ ಹತ್ಯೆ ದಿನ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಬಶೀರ್ ಸಾವು 30

ಮಂಗಳೂರು: ದೀಪಕ್ ರಾವ್ ಹತ್ಯೆಯಾದ ದಿನದಂದು ಮಂಗಳೂರಿನ ಕೊಟ್ಟಾರಚೌಕಿಯಲ್ಲಿ ಮಾರಣಾಂತಿಕ ಹಲ್ಲೆಗೆ ಹೊಳಗಾಗಿದ್ದ ವ್ಯಾಪಾರಿ ಬಶೀರ್ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಫಾಸ್ಟ್ ಫುಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಶೀರ್ ರಾತ್ರಿ 11.30ರ ಸುಮಾರಿಗೆ ತನ್ನ ಮನೆಯತ್ತ ತೆರಳುತ್ತಿದ್ದರು. ಈ ವೇಳೆ 3 ಬೈಕ್‍ನಲ್ಲಿ ಬಂದ 7 ಜನರ ತಂಡ ಏಕಾಏಕಿ ಬಶೀರ್ ಮೇಲೆ ತಲ್ವಾರ್ ದಾಳಿ ನಡೆಸಿ ಪರಾರಿಯಾಗಿದ್ದರು.

ಅಂಬುಲೆನ್ಸ್ ಚಾಲಕ ಶೇಖರ್ ಎಂಬುವವರು ಬಶೀರ್ ಅವರನ್ನು ರಕ್ಷಣೆ ಮಾಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದರು. ಆದರೆ ಬಶೀರ್ ಬದುಕುಳಿಯಲಿಲ್ಲ.

ಇನ್ನು ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಸಹ ಬಂಧಿಸಲಾಗಿದ್ದು ಶ್ರೀಜಿತ್ ಪಿ.ಕೆ (25), ಕಿಶನ್ ಪೂಜಾರಿ (21), ಧನುಷ್ ಪೂಜಾರಿ (22), ಸಂದೇಶ್ ಕೋಟ್ಯಾನ್ (22) ಬಂಧಿತ ಆರೋಪಿಗಳು. ಮಂಗಳೂರಿನ ಕಂಕನಾಡಿ ಗರೋಡಿ ಜಾತ್ರೆಗೆ ಬಂದಿದ್ದ ಈ ಯುವಕರ ತಂಡ ದೀಪಕ್ ರಾವ್ ಹತ್ಯೆಯಾದ ದಿನ ಎಜೆ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು.

ಹಿಂದೂ ಯುವಕನ ಕೊಲೆಯಾಗಿದೆ ಎಂದು ಆಕ್ರೋಶಗೊಂಡ ಈ ಯುವಕರು ಸೇಡು ತೀರಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ದೀಪಕ್ ಹತ್ಯೆಗೆ ರಿವೇಂಜ್ ಆಗಿ ಕೃತ್ಯ ಬಷೀರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಕಮೀಷನರ್ ಹೇಳಿದರು.

Related Articles

Leave a comment

Back to Top

© 2015 - 2017. All Rights Reserved.