ವಿರಾಟ್ ಕೊಹ್ಲಿ ಕಡಿಮೆ ರನ್‍ಗೆ ಔಟಾಗಿದ್ದಕ್ಕೆ ಬೆಂಕಿ ಹಚ್ಚಿಕೊಂಡ ಅಭಿಮಾನಿ

Kannada News, National, Sports No Comments on ವಿರಾಟ್ ಕೊಹ್ಲಿ ಕಡಿಮೆ ರನ್‍ಗೆ ಔಟಾಗಿದ್ದಕ್ಕೆ ಬೆಂಕಿ ಹಚ್ಚಿಕೊಂಡ ಅಭಿಮಾನಿ 13

ಮಧ್ಯಪ್ರದೇಶ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಡಿಮೆ ರನ್‍ಗೆ ಔಟಾಗಿದ್ದನ್ನು ಕಂಡು ಆಘಾತಗೊಂಡ ರೈಲ್ವೇ ಕಾರ್ಮಿಕನೊಬ್ಬ ಬೆಂಕಿ ಹಚ್ಚಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ವಿರಾಟ್ ಅಭಿಮಾನಿಯನ್ನು ಅಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ಹಚ್ಚಿಕೊಂಡ ವ್ಯಕ್ತಿ ಬಾಬುಲಾಲ್ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ ಎಂದು ತಿಳಿದು ಬಂದಿದೆ. ಶುಕ್ರವಾರ ರಾತ್ರಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯವನ್ನ ಇವರು ವೀಕ್ಷಿಸುತ್ತಿದ್ದರು. ಆದರೆ ವಿರಾಟ್ ಕೇವಲ 5 ರನ್ ಗಳಿಸಿ ಔಟಾಗಿದ್ದನ್ನು ಕಂಡ ಈತ ಮರರುಕ್ಷಣವೇ ಬೆಂಕಿ ಹಚ್ಚಕೊಂಡಿದ್ದಾನೆ ಎಂದು ಹೇಳಲಾಗಿದೆ.

ಗಂಡ ಕಿರುಚಾಡುತ್ತಿರುವುದನ್ನು ಕೇಳಿದ ಹೆಂಡತಿ ಓಡಿ ಬಂದು ನೋಡಿದಾಗ ವಿಷಯ ಗಮನಕ್ಕೆ ಬಂದಿದೆ. ಘಟನೆಯಿಂದ ಈತನಿಗೆ ಗಂಬೀರವಾ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

 

Related Articles

Leave a comment

Back to Top

© 2015 - 2017. All Rights Reserved.