‘ಪದ್ಮಾವತ್’ ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್

Entertainment, Kannada News No Comments on ‘ಪದ್ಮಾವತ್’ ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್ 19

ಮುಂಬೈ: ದೇಶಾದ್ಯಂತ ಭಾರೀ ಗದ್ದಲ, ಚರ್ಚೆಗೆ ಒಳಗಾಗಿದ್ದ ಸಂಜಯ್ ಲೀಲಾ ಬನ್ಸಾಲಿಯವರ `ಪದ್ಮಾವತ್'(ಪದ್ಮಾವತಿ) ಚಿತ್ರ ಜ.25ಕ್ಕೆ ಬಿಡುಗಡೆಯಾಗಲಿದೆ.

ಕಳೆದ ವಾರ ಚಿತ್ರದ ಹೆಸರನ್ನು ಬದಲಾಯಿಸಬೇಕೆಂದು ಸೂಚಿಸಿದ್ದ ಸೆನ್ಸಾರ್ ಮಂಡಳಿ ಇದೀಗ ಚಿತ್ರ ಬಿಡುಗಡೆಗೆ ಹಸಿರು ನಿಶಾನೆ ತೋರಿದೆ.

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅಭಿನಯದ ಈ ಚಿತ್ರದಲ್ಲಿ 16ನೇ ಶತಮಾನದ ಮಲಿಕ್ ಮುಹ್ಮದ್ ಜಯಸಿ ಅವರ ‘ಪದ್ಮಾವತ್’ ಎಂಬ ಮಹಾ ಕಾವ್ಯವನ್ನು ಆಧಾರವನ್ನಾಗಿಟ್ಟುಕೊಂಡು, 150 ಕೋಟಿ ರೂ. ವೆಚ್ಚದಲ್ಲಿ ಚಿತ್ರವನ್ನು ಮಾಡಲಾಗಿದೆ, ಎಂದು ಸಂಸದೀಯ ಸಮಿತಿ ಮುಂದೆ ಹಾಜರಾಗಿದ್ದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹೇಳಿದ್ದರು.

Related Articles

Leave a comment

Back to Top

© 2015 - 2017. All Rights Reserved.