ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಭಾರೀ ಅಗ್ನಿ ಅವಘಡ: ಐವರು ಸಜೀವ ದಹನ

BREAKING NEWS, Crime, Kannada News, Regional, Top News No Comments on ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಭಾರೀ ಅಗ್ನಿ ಅವಘಡ: ಐವರು ಸಜೀವ ದಹನ 21

ಬೆಂಗಳೂರು: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಐವರು ಸಜೀವ ದಹನಗೊಂಡ ಘೋರ ಘಟನೆಯೊಂದು ನಡೆದಿದೆ.

ಬೆಂಗಳೂರಿನ ಕೆ.ಆರ್ ಮಾರ್ಕೆಟ್’ನಲ್ಲಿರುವ ಕೈಲಾಶ್ ಬಾರ್’ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಸಂಭವಿಸಿದೆ. ಅಗ್ನಿ ದುರಂತದಿಂದ ಬಾರ್’ನಲ್ಲಿ ಮಲಗಿದ್ದ ಐವರೂ  ಸಜೀವ ದಹನವಾಗಿದ್ದಾರೆ.  

ಮುಂಜಾನೆ 2.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಮೃತರನ್ನು ತುಮಕೂರು ಮೂಲದ ಸ್ವಾಮಿ(23), ಪ್ರಸಾದ್(20), ಮಹೇಶ್ (35), ಹಾಸನದ ಮಂಜುನಾಥ್ ( 45), ಮಂಡ್ಯದ ಕೀರ್ತಿ(24) ಎಂದು ಗುರುತಿಸಲಾಗಿದೆ.

ಬಾರ್ ಕಟ್ಟಡ ಸುಮಾರು 20 ರಿಂದ 30 ವರ್ಷಗಳ ಹಳೆಯದು ಎಂದು ತಿಳಿದು ಬಂದಿದೆ. ಹಾಗಾಗಿ ಕಟ್ಟಡದಲ್ಲಿ ಯಾವುದೇ ಎಮರ್ಜಿನ್ಸಿ ಎಕ್ಸಿಟ್ ಇಲ್ಲದ ಕಾರಣ ಐವರು ಸಜೀವ ದಹನವಾಗಿದ್ದಾರೆ. ಐದು ಶವಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕಟ್ಟಡದಿಂದ ಹೊರಕ್ಕೆ ತೆಗೆದಿದ್ದಾರೆ. ಬಾರ್ ಮಾಲೀಕ ಆರ್.ವಿ.ದಯಾಶಂಕರ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.