ರಾಕಿಂಗ್ ಸ್ಟಾರ್ ಯಶ್’ಗೆ ಇಂದು ಹುಟ್ಟುಹಬ್ಬದ ಸಂಭ್ರಮ: ಇಲ್ಲಿದೆ ನೋಡಿ ಬಿಡುಗಡೆಯಾದ KGF ಚಿತ್ರದ ಟೀಸರ್

Entertainment, Kannada News No Comments on ರಾಕಿಂಗ್ ಸ್ಟಾರ್ ಯಶ್’ಗೆ ಇಂದು ಹುಟ್ಟುಹಬ್ಬದ ಸಂಭ್ರಮ: ಇಲ್ಲಿದೆ ನೋಡಿ ಬಿಡುಗಡೆಯಾದ KGF ಚಿತ್ರದ ಟೀಸರ್ 118

ಸಿನಿಮಾ: ರಾಕಿಂಗ್ ಸ್ಟಾರ್ ಯಶ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇಂದು ಅವರು 32 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ಯಶ್ ಹುಟ್ಟುಹಬ್ಬದ ಹಿನ್ನಲೆ ನೆಚ್ಚಿನ ನಟನ ನೋಡಲು ಅವರ ಮನೆ ಮುಂದೆ ಅಭಿಮಾನಿಗಳು ಮುಗಿಬಿದ್ದಿದ್ದರು. ಭಾನುವಾರ ಸಂಜೆಯಿಂದಲ್ಲೇ ಕತ್ರಿಗುಪ್ಪೆ ನಿವಾಸದ ಬಳಿ ರಾಜ್ಯದ ಮೂಲೆ ಮೂಲೆಯಿಂದ ಬಂದ ಅಭಿಮಾನಿಗಳು ಯಶ್‍ರನ್ನು ನೋಡಿ ಪ್ರೀತಿಯಿಂದ ವಿಶ್ ಮಾಡಿ, ಕೇಕ್ ಕತ್ತರಿಸಿ ಖುಷಿಪಟ್ಟರು. ಇನ್ನು ಯಶ್ ಪ್ರೀತಿಯಿಂದ ಅಭಿಮಾನಿಗಳು ತಂದಿದ್ದ ಕೇಕ್‍ನ್ನು ಕಟ್ ಮಾಡಿದರು.

ಹುಟ್ಟುಹಬ್ಬದ ಪ್ರಯುಕ್ತ ಈ ವರ್ಷ ಸಾಕಷ್ಟು ವಿಶೇಷತೆಗಳನ್ನು ನೀಡಲಿದ್ದಾರೆ. ಅವರ ಹುಟ್ಟುಹಬ್ಬದ ಸಂಧರ್ಭದಲ್ಲಿ ಅನೇಕ ಸಿನಿಮಾಗಳು ಅನೌನ್ಸ್ ಆಗಲಿವೆ. ಯಶ್ ಅವರ ಹುಟ್ಟುಹಬ್ಬಕ್ಕೆ ಕೆಜಿಎಫ್ ಟೀಂ ಗಿಫ್ಟ್ ಆಗಿ ಟೀಸರ್ ರಿಲೀಸ್ ಮಾಡಿದೆ.

ಯಶ್ ಬರ್ತ್​ಡೇ ಸಲುವಾಗಿ ರಿಲೀಸ್ ಆಗಿರುವ ಈ ಟೀಸರ್, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. ಕೆಲ ತಿಂಗಳ ಹಿಂದೆ ಫಸ್ಟ್ ಲುಕ್ ರಿಲೀಸ್ ಮಾಡಲಾಗಿತ್ತು. ಆನಂತರ ಆ ಚಿತ್ರ ಬೇರೆ ಬೇರೆ ಭಾಷೆಗಳಲ್ಲೂ ಏಕಕಾಲಕ್ಕೆ ಮೂಡಿಬರಲಿದೆ ಎಂಬ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿತ್ತು. ಇದೀಗ ಟೀಸರ್ ರಿಲೀಸ್ ಆಗಿದ್ದು , ಮಾರ್ಚ್ ಅಥವಾ ಏಪ್ರಿಲ್​ನಲ್ಲಿ ‘ಕೆಜಿಎಫ್’ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಇದೆ ವೇಳೆ ಹೊಸ ಸಿನಿಮಾಗಳೂ ಸಹ ಅನೌನ್ಸ್ ಆಗುತ್ತಿದ್ದು. ಸ್ಯಾಂಡಲ್​ವುಡ್​ನ ಖ್ಯಾತ ನಿರ್ವಪಕರಾದ ರಾಕ್​ಲೈನ್ ವೆಂಕಟೇಶ್ ಮತ್ತು ಕೆ. ಮಂಜು ಕೂಡ ಯಶ್ ಜತೆಗೆ ಸಿನಿಮಾ ಮಾಡಲಿದ್ದಾರೆ. ಕೆ. ಮಂಜು ನಿರ್ವಣದ ‘ರಾಜಾಹುಲಿ’, ‘ಸಂತು ಸ್ಟ್ರೇಟ್ ಫಾರ್ವ್​ಡ್’ ಸಿನಿಮಾಗಳಲ್ಲಿ ಯಶ್ ಈಗಾಗಲೇ ನಟಿಸಿದ್ದಾರೆ. ಇದೀಗ ಮೂರನೇ ಬಾರಿ ಮಂಜುಗೆ ಯಶ್ ಕಾಲ್​ಶೀಟ್ ಸಿಕ್ಕಿದೆ. ಅತ್ತ ರಾಕ್​ಲೈನ್ ಕೂಡ ಯಶ್​ಗಾಗಿ ಸಿನಿಮಾ ನಿರ್ಮಾಣ ಮಾಡಲಿದ್ದು, ಅದರ ನಿರ್ದೇಶಕರು ಯಾರು ಎಂಬುದು ತಿಳಿದುಬಂದಿಲ್ಲ. 2017ರಲ್ಲಿ ಯಶ್ ನಟನೆಯ ಯಾವ ಸಿನಿಮಾ ತೆರೆಕಂಡಿರಲಿಲ್ಲ. ಇದೀಗ ಸಾಲು ಸಾಲು ಸಿನಿಮಾಗಳು ಅನೌನ್ಸ್ ಆಗಿರುವುದು ಯಶ್ ಅಭಿಮಾನಿಗಳಿಗೆ ಖುಷಿ ತಂದಿದೆ.

Related Articles

Leave a comment

Back to Top

© 2015 - 2017. All Rights Reserved.