ಹುಬ್ಬಳ್ಳಿ-ಧಾರವಾಡ ಬಂದ್: ಕಲ್ಲು ತೂರಾಟ, ಟೈರ್’ಗಳಿಗೆ ಬೆಂಕಿ

BREAKING NEWS, Kannada News, Regional, Top News No Comments on ಹುಬ್ಬಳ್ಳಿ-ಧಾರವಾಡ ಬಂದ್: ಕಲ್ಲು ತೂರಾಟ, ಟೈರ್’ಗಳಿಗೆ ಬೆಂಕಿ 23

ಹುಬ್ಬಳ್ಳಿ-ಧಾರವಾಡ: ವಿಜಯಪುರ ಬಾಲಕಿ ಅತ್ಯಾಚಾರ-ಕೊಲೆ, ಕೊರೆಗಾಂವ ದಲಿತರ ಮೇಲಿನ ಹಲ್ಲೆ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಇಂದು ಹುಬ್ಬಳ್ಳಿ, ಧಾರವಾಡ ಬಂದ್​ಗೆ ದಲಿತರ ಪರ ಸಂಘಟನೆಗಳು ಕರೆ ನೀಡಿವೆ.

ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಬಂದ್​ ನಡೆಯಲಿದ್ದು, ಈ ವೇಳೆ ಬಸ್​ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಮೆಡಿಕಲ್​ ಶಾಪ್ ಹಾಗೂ ಆಸ್ಪತ್ರೆಗಳು, ಶಾಲಾ ಕಾಲೇಜು ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಇನ್ನೂ ಇಂದು ನಡೆಯಬೇಕಿದ್ದ ಕರ್ನಾಟಕ ವಿವಿಯ ಸ್ನಾತಕೋತ್ತರ ಪರೀಕ್ಷೆಗಳು ನಾಳೆಗೆ ಮುಂದೂಡಲಾಗಿದೆ.

ನಗರದಲ್ಲಿ ಪ್ರತಿಭಟನಾಕಾರರು ಕಲ್ಲು ತೂರುತ್ತಿದ್ದು, ಹಳೇ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಲ್ಲಿದ್ದ ಟಿಕೆಟ್ ಕೌಂಟರ್ ಧ್ವಂಸ ಮಾಡಿದ್ದಾರೆ. ಚೆನ್ನಮ್ಮ ವೃತ್ತದಲ್ಲಿ ಬೆಳ್ಳಂಬೆಳಗ್ಗೆ ಟೈರ್ ಗೆ ಬೆಂಕಿ ಹಚ್ಚಿ ಹೋರಾಟ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಕೊರೆಗಾಂವ್‍ನಲ್ಲಿ ದಲಿತನ ಹತ್ಯೆ ಖಂಡಿಸಿ ಧಾರವಾಡದಲ್ಲಿ ಬಂದ್ ಆಚರಿಸಲಾಗುತ್ತಿದ್ದು, ನಗರದ ಜುಬ್ಲಿ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿದ್ದಾರೆ.

ಇತ್ತ ಚಿಕ್ಕೋಡಿ ಪಟ್ಟಣದಲ್ಲೂ ಬಂದ್​​ಗೆ ವಿವಿಧ ದಲಿತ ಪರ ಸಂಘಟನೆಗಳು ಬಂದ್​ಗೆ ಕರೆ ನೀಡಿದ್ದು, ಇಂದು ಬೃಹತ್​ ರ್ಯಾಲಿ ನಡೆಸುವ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲು ಸಂಘಟನೆಗಳು ಮುಂದಾಗಿವೆ. ಬೆಳಿಗ್ಗೆ ಬಾಗಿಲು ತೆಗೆದಿದ್ದ ಅಂಗಡಿಗಳ ಮೇಲೆ ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿದ್ದು, ಅಂಗಡಿಗಳ ಗಾಜನ್ನ ಪುಡಿ ಪುಡಿ ಮಾಡಿ ಘೋಷಣೆ ಕೂಗಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.