ಅಂಡರ್-19 ಕ್ರಿಕೆಟ್ ವಿಶ್ವಕಪ್‌’ಗೆ ಅಧಿಕೃತ ಚಾಲನೆ

Kannada News, Sports No Comments on ಅಂಡರ್-19 ಕ್ರಿಕೆಟ್ ವಿಶ್ವಕಪ್‌’ಗೆ ಅಧಿಕೃತ ಚಾಲನೆ 18

ನ್ಯೂಜಿಲೆಂಡ್: ಅಂಡರ್-19 ಕ್ರಿಕೆಟ್ ವಿಶ್ವಕಪ್‌’ಗೆ ಭಾನುವಾರ ಅಧಿಕೃತ ಚಾಲನೆ ದೊರೆತಿದ್ದು, ಇಂದಿನಿಂದ ಅಭ್ಯಾಸ ಪಂದ್ಯಗಳು ಆರಂಭವಾಗಲಿವೆ.

ಇಲ್ಲಿನ ಹೇಗ್ಲಿ ಓವಲ್ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶ್ವಕಪ್‌’ನಲ್ಲಿ ಪಾಲ್ಗೊಳ್ಳಲಿರುವ 16 ತಂಡಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಕ್ರೈಸ್ಟ್‌’ಚರ್ಚ್‌’ನ ಕೌನ್ಸಿಲರ್ ಆರೋನ್ ಕಿಯೊನ್ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಡೆಬ್ಬಿ ಹಾಕ್ಲೆ ಎಲ್ಲಾ ತಂಡಗಳನ್ನು ಸ್ವಾಗತಿಸಿದರು.

ಜ.13ರಿಂದ ಪ್ರಧಾನ ಸುತ್ತಿನ ಪಂದ್ಯಗಳು ಆರಂಭವಾಗಲಿದ್ದು, ಅದಕ್ಕೂ ಮುನ್ನ ಭಾರತ ತಂಡ ಜ.9ರಂದು ದಕ್ಷಿಣ ಆಫ್ರಿಕಾ ಹಾಗೂ ಜ.11ರಂದು ಕೀನ್ಯಾ ವಿರುದ್ಧ 2 ಅಭ್ಯಾಸ ಪಂದ್ಯ ಗಳನ್ನು ಆಡಲಿದೆ.

Related Articles

Leave a comment

Back to Top

© 2015 - 2017. All Rights Reserved.