ಇತಿಹಾಸ ಸೃಷ್ಟಿ ಮಾಡಲು ಹೊರಟಿದ್ದೇನೆ: ಯಾರ ಮುಲಾಜಿಗೂ ಒಳಗಾಗದೆ ಅಧಿಕಾರ ನಡೆಸುವೆ;- ಹೆಚ್.ಡಿ.ಕೆ

Kannada News, Regional No Comments on ಇತಿಹಾಸ ಸೃಷ್ಟಿ ಮಾಡಲು ಹೊರಟಿದ್ದೇನೆ: ಯಾರ ಮುಲಾಜಿಗೂ ಒಳಗಾಗದೆ ಅಧಿಕಾರ ನಡೆಸುವೆ;- ಹೆಚ್.ಡಿ.ಕೆ 80

ಮೈಸೂರು: ಆಡಳಿತದ ವಿಷಯದಲ್ಲಿ ನಾನು ಯಾರ ಮುಲಾಜಿಗೂ ಒಳಗಾಗುವುದಿಲ್ಲ ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ನಗರದ ಕಲಾಮಂದಿರಲ್ಲಿ ನಡೆದ ‘ಬಲ್ಲವರೊಡನೆ ಬೌದ್ಧಿಕ ಚಿಂತನೆ’ ಸಂವಾದ ಕಾರ್ಯಕ್ರಮದಲ್ಲಿ ನೆರೆದಿದ್ದವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ನಾನು ಹಣ ಮಾಡಬೇಕು, ಸಂಪಾಧನೆ ಮಾಡಬೇಕು ಎಂಬ ಕೆಟ್ಟ ಉದ್ದೇಶ ನನಗಿಲ್ಲ. ನಾನು ಬದುಕಿರುವಷ್ಟು ದಿನ ರಾಜ್ಯದ ಒಳಿತಿಗಾಗಿ, ದುಡಿಯಬೇಕು ಎಂಬುದೇ ನನ್ನ ಆಸೆ. ಹೃದಯ ಶಸ್ತ್ರ ಚಿಕಿತ್ಸೆ ನಂತರ ನನಗೆ ಮರು ಜನ್ಮ ಸಿಕ್ಕಿದೆ. ಆದ್ದರಿಂದಲೇ ರಾಜ್ಯದ ವಿವಿಧ ಕಡೆಗಳಲ್ಲಿ ಸಮಾಜದ ವಿವಿಧ ವರ್ಗದ ಜನರ ಜತೆ ಸಂವಾದ ನಡೆಸುತ್ತಿದ್ದೇನೆ. ಆ ಮೂಲಕ ಅವರು ನೀಡುವ ಸಲಹೆ, ಸೂಚನೆಗಳ ಸಹಾಯದಿಂದ ನಮ್ಮ ಪಕ್ಷದ ಪ್ರನಾಳಿಕೆ ಸಿದ್ಧಪಡಿಸಿ ಅದರಂತೆಯೇ ಆಡಳಿತ ನಡೆಸುತ್ತೇನೆ ಎಂದಿದ್ದಾರೆ.

ನಾನು ಅಧಿಕಾರಕ್ಕೆ ಬಂದರೆ ತಿಂಗಳಿಗೆ ಕನಿಷ್ಠ 3-4 ಬಾರಿಯಾದರೂ ನಿಮ್ಮಂತಹ ಹಿರಿಯರು, ಕೃಷಿಕರು, ವಿವಿಧ ಕ್ಷೇತ್ರದ ಅನುಭವಸ್ಥರನ್ನು ವಿಧಾನಸೌಧಕ್ಕೆ ಆಹ್ವಾನ ನೀಡಿ ನಿಮ್ಮ ಅಭಿಪ್ರಾಯ, ಸಲಹೆ ಗಳನ್ನು ಪಡೆದು ಅಧಿಕಾರ ನಡೆಸುತ್ತೇನೆ. ಅಲ್ಲದೆ ವಾರದಲ್ಲಿ ಒಂದು ದಿನ ರೈತರನ್ನು ಕರೆಸಿ ಅವರಿಂದ ಸಲಹೆ ಪಡೆಯುತ್ತೇನೆ. ರೈತರು ಅಂದರೆ ಹಸಿರು ಶಾಲು ಹಾಕಿಕೊಂಡು ಪ್ರತಿಭಟನೆ, ರಾಜಕೀಯ ಮಾಡುವವರಲ್ಲ. ಶ್ರಮವಹಿಸಿ ಕೆಲಸಮಾಡಿ ಮುಂದೆ ಬಂದಿರುವ ಪ್ರಗತಿಪರ ರೈತರು. ಅವರ ಸಲಹೆ ಸಹಾಯದಿಂದ ರೈತರ ಅಭಿವೃದ್ಧಿಗೆ ಯೋಜನೆ ರೂಪಿಸುತ್ತೇನೆ.

ರಾಜ್ಯ ಸರ್ಕಾರ ದಲಿತರ ಅಭಿವೃದ್ದಿಗೆ 86 ಸಾವಿರ ಕೋಟಿ ಕೊಟ್ಟಿದ್ದಿವಿ ಎಂದು ಹೇಳುತಲೇ ಇದೆ. ಆದರೆ ಇದರ ಇಂಪ್ಲಿಮೆಂಟ್ ಹೇಗಾಗಿದೆ ಎಂಬುದನ್ನು ಪರಿಶೀಲನೆ ಮಾಡಿದಾಗಲೆ ತಿಳಿಯುವುದು.

ಇಂದು ಮಾಧ್ಯಮಗಳು ಜನರ ದಿಕ್ಕು ತಪ್ಪಿಸುತ್ತಿವೆ. ಸಮೀಕ್ಷೆಗಳಿಂದ ನನಗೆ ಡಾಮೇಜ್ ಮಾಡಬಹುದು ಆದರೆ ಜನರನ್ನ ದಿಕ್ಕು ತಪ್ಪಿಸುವ ಕೆಲಸ ಆಗ್ತಿದೆ. ಮುಂದಿನ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯುತ್ತೆವೆ ಎಂದರು.

ನಮ್ಮ ಮೈಸೂರಿನ ಜೆಡಿಎಸ್ ನಾಯಕರು ಮನಸ್ಸು ಮಾಡಿದ್ರೆ ಸಿ ಎಂ ತವರು ಜಿಲ್ಲೆಯಲ್ಲೇ 8 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ತಾರೆ. ಶಾಸಕರಾದ ಜಿ ಟಿ ದೇವೇಗೌಡ, ಎಂ ಎಲ್ ಸಿ ಸಂದೇಶ್ ನಾಗರಾಜ್ ಅವರಿಗೆ ಹೆಚ್ ಡಿ ಕೆ ಸಲಹೆ ನೀಡಿದರು.

ಸಾಮಾಜಿಕ ಜಾಲತಾಣಗಳು ಅನುಕೂಲಗಳ ಜೊತೆ ಅನಾನೂ ಕೂಲವು ಆಗ್ತಿದೆ. ನಮ್ಮ ಯುವಕರು ಕೀಳು ಮಟ್ಟದ ಕಾಮೇಂಟ್ ಮಾಡಬಾರದು ಎಂದು ಯುವ ಜೆ ಡಿ ಎಸ್ ಕಾರ್ಯಕರ್ತರಿಗೆ ಹೆಚ್ ಡಿ ಕೆ ಕಿವಿಮಾತು ಹೇಳಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಒಟ್ಟಾರೆ ಸರ್ಕಾರಿ ಶಾಲೆಗಳನ್ನ ಖಾಸಗಿ ಶಾಲೆಗಳ ಮಾಧರಿಯಲ್ಲಿ ಅಭಿವೃದ್ದಿ ಮಾಡ್ತಿನಿ. ಪ್ರತಿಯೊಂದು ಹಳ್ಳಿಯಲ್ಲಿಯೂ ವೈ ಫೈ ಜಾರಿ. ಒಮ್ಮೆ ಅಧಿಕಾರಕ್ಕೆ ಬಂದ್ರೆ ಕೇವಲ ಒಂದೇ ತಿಂಗಳಲ್ಲಿ ಸ್ವಾಮಿ ನಾಥನ್ ವರದಿ ಜಾರಿಗೆ. ರೈತರನ್ನು ಆರ್ಥಿಕವಾಗಿ ಶಕ್ತಿ ತುಂಬುತ್ತೇವೆ. ಪುಕ್ಕಟೆ ಅಕ್ಕಿ ಯಲ್ಲಿ ರೈತ ಜೀವನ ಸಾಗಿಸುವ ಅಗತ್ಯ ಇಲ್ಲ. ರೈತನೇ ಸ್ವಾವಲಂಬಿಯಾಗಿ ಜೀವನ ನಡೆಸುವಂತೆ ಸದೃಡರನ್ನಾಗಿ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.