ಬದುಕಿದ್ದವನನ್ನ ಸತ್ತನೆಂದು ಶವಾಗಾರಕ್ಕೆ ಶಿಫ್ಟ್ ಮಾಡಿ ಎಡವಟ್ಟು ಮಾಡಿದ ವೈದ್ಯರು

Crime, Kannada News, Regional No Comments on ಬದುಕಿದ್ದವನನ್ನ ಸತ್ತನೆಂದು ಶವಾಗಾರಕ್ಕೆ ಶಿಫ್ಟ್ ಮಾಡಿ ಎಡವಟ್ಟು ಮಾಡಿದ ವೈದ್ಯರು 18

ಹುಬ್ಬಳ್ಳಿ: ಬದುಕಿದ್ದವನನ್ನ ಸತ್ತನೆಂದು ಶವಾಗಾರಕ್ಕೆ ಶಿಫ್ಟ್ ಮಾಡುವ ಮೂಲಕ ಹುಬ್ಬಳ್ಲಿಯ ಕಿಮ್ಸ್ ಆಸ್ಪತ್ರೆ ವೈದ್ಯರು ಎಡವಟ್ಟು ಮಾಡಿದ್ಧಾರೆ.

ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಹುಬ್ಬಳ್ಳಿ ಯುವಕ ಪ್ರವೀಣ್ ಮೂಳೆ ಎಂಬವರನ್ನು ರಾತ್ರಿ 8 ಗಂಟೆಗೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಾರ್ಗ ಮಧ್ಯೆ ಯುವಕ ಮೃತಪಟ್ಟರುವುದಾಗಿ ವೈದ್ಯರು ತಿಳಿಸಿದ್ದರಿಂದ ಇಲ್ಲಿನ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿತ್ತು.

ಬೆಳಗ್ಗೆ ಬೆಳಗ್ಗೆ 10 ಗಂಟೆ ಸುಮಾರಿಗೆ ಕುಟುಂಬಸ್ಥರು ಮರಣೋತ್ತರ ಪರೀಕ್ಷೆಗೂ ಮುನ್ನ ಯುವಕನನ್ನು ನೋಡಲು ತೆರಳಿದಾಗ ಆತನ ಹೃದಯ ಬಡಿತವಿರುವುದು ತಿಳಿದು ಬಂದಿದೆ. ಕೂಡಲೇ ಕಿಮ್ಸ್​ನಿಂದ ಸ್ಥಳೀಯ ಆಸ್ಪತ್ರೆಗೆ ಕುಟುಂಬಸ್ಥರು ಕರೆದೊಯ್ದಿದ್ದಾರೆ. ಯುವಕನ ದೇಹವನ್ನು ಪರೀಕ್ಷಿಸಿದ ವೈದ್ಯರು 20 ನಿಮಿಷದ ಮೊದಲು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ವೈದ್ಯರು ನಿರ್ಲಕ್ಷ್ಯ ತೋರಿಸಿ, ಯುವಕನನ್ನು ಜೀವಂತವಿರುವಾಗಲೇ ಶವಾಗಾರಕ್ಕೆ ಶಿಫ್ಟ್ ಮಾಡಿದ್ದಾರೆಂದು ಆರೋಪಿಸಿರುವ ಸಂಬಂಧಿಕರು ಕಿಮ್ಟ್ ಆಸ್ಪತ್ರೆ ವಿರುದ್ಧ ಆಕ್ರೋಶಗೊಂಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.