ಲೈಂಗಿಕ ದೌರ್ಜನ್ಯ ಆರೋಪ: ಸಾಧುಕೋಕಿಲಾಗೆ ನಿರೀಕ್ಷಣಾ ಜಾಮೀನು

BREAKING NEWS, Kannada News, Regional, Top News No Comments on ಲೈಂಗಿಕ ದೌರ್ಜನ್ಯ ಆರೋಪ: ಸಾಧುಕೋಕಿಲಾಗೆ ನಿರೀಕ್ಷಣಾ ಜಾಮೀನು 23

ಮೈಸೂರು: ಮಸಾಜ್ ಸೆಂಟರ್’ನಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಾಧುಕೋಕಿಲಗೆ ನಿರೀಕ್ಷಣಾ ಜಾಮೀನು ದೊರೆತಿದೆ.

ಮೈಸೂರಿನ 7 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಸಾಧು ಕೋಕಿಲ ಜಾಮೀನು ಪಡೆದಿದ್ದಾರೆ. ಸಂತ್ರಸ್ತ ಯುವತಿ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ್ದ ಹೇಳಿಕೆ ಆಧರಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಸೆಕ್ಷನ್ 438 ಅಡಿ ಪೊಲೀಸರು ಪೂರ್ವ ಬಂಧನ ಮಾಡದಂತೆ ಸಾಧು ಕೋಕಿಲ ಜಾಮೀನು ಪಡೆದಿದ್ದಾರೆ.

ಜನವರಿ 2 ರಂದು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಅಗತ್ಯಬಿದ್ದರೆ ವೈದ್ಯಕೀಯ ಅಥವಾ ಡಿಎನ್’ಎ ಪರೀಕ್ಷೆಗೆ ಒಳಗಾಗಬೇಕು. ಸಾಕ್ಷಿ ನಾಶ ಮಾಡಬಾರದು. ನೊಂದ ಯುವತಿಗೆ ಒತ್ತಡ ಹೇರಬಾರದು. 15 ದಿನಗಳ ಒಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಸಹಕರಿಸಬೇಕು. ಎಂಬ ಷರತ್ತುಗಳ ಮೇಲೆ ಜಾಮೀನು ಮಂಜೂರು ಮಾಡಿದೆ.

ಇದೇ ಪ್ರಕರಣದಲ್ಲಿ ನಟ ಮಂಡ್ಯ ರಮೇಶ್ ಹೆಸರು ಕೂಡ ಕೇಳಿ ಬಂದಿದೆ. ಆರೋಪಿ ಸ್ಪಾ ಮಾಲೀಕ ರಾಜೇಶ್ ಬಂಧನದಲ್ಲಿದ್ದು, ಜಾಮೀನು ದೊರೆತಿಲ್ಲ.

Related Articles

Leave a comment

Back to Top

© 2015 - 2017. All Rights Reserved.