ಧೋನಿ ರೆಕಾರ್ಡ್ ಬ್ರೇಕ್ ಮಾಡಿದ ವೃದ್ಧಿಮಾನ್ ಸಹಾ

Kannada News, Sports No Comments on ಧೋನಿ ರೆಕಾರ್ಡ್ ಬ್ರೇಕ್ ಮಾಡಿದ ವೃದ್ಧಿಮಾನ್ ಸಹಾ 15

ಕೇಪ್ಟೌನ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ವೃದ್ಧಿಮಾನ್ ಸಹಾ ಮಾಜಿ ನಾಯಕ ಎಂ.ಎಸ್. ಧೋನಿ ದಾಖಲೆ ಮುರಿದಿದ್ದಾರೆ.

ಹೌದು. ಸಹಾ ಪಂದ್ಯವೊಂದರಲ್ಲಿ 10 ಕ್ಯಾಚ್ ಪಡೆದಿದ್ದರು. ಈ ಮೂಲಕ 2014ರ ಡಿಸೆಂಬರ್ನಲ್ಲಿ ಮೆಲ್ಬೋರ್ನ್ನಲ್ಲಿ ಆಸ್ಟ್ರೇಲಿಯ ವಿರುದ್ಧ ಧೋನಿ ನಿರ್ಮಿಸಿದ ದಾಖಲೆ(9 ಔಟ್) ಮುರಿದಿದ್ದಾರೆ. ಸಹಾ ಎಲ್ಲ ಆಟಗಾರರನ್ನು ಕ್ಯಾಚ್ ಮೂಲಕ ಔಟ್ ಮಾಡಿದ್ದರೆ, ಧೋನಿ 8 ಕ್ಯಾಚ್, 1 ಸ್ಟಂಪಿಂಗ್ ಮಾಡಿದ್ದರು. ಧೋನಿಗಿಂತ ಮೊದಲು 1996ರಲ್ಲಿ ನಯನ್ ಮೊಂಗಿಯಾ ಡರ್ಬನ್ನಲ್ಲಿ ದ. ಆಫ್ರಿಕದ ವಿರುದ್ಧ 8 ಕ್ಯಾಚ್ಗಳನ್ನು ಪಡೆದಿದ್ದರು.

ಟೆಸ್ಟ್ ಇತಿಹಾಸದಲ್ಲಿ ಸಹಾ ವಿಕೆಟ್ಕೀಪಿಂಗ್ನಲ್ಲಿ ಎರಡನೇ ಜಂಟಿ ಶ್ರೇಷ್ಠ ನಿರ್ವಹಣೆ ತನ್ನದಾಗಿಸಿಕೊಂಡಿದ್ದಾರೆ. ಇಂಗ್ಲೆಂಡ್’ನ ಬಾಬ್ ಟೇಲರ್ 1980ರಲ್ಲಿ ಮುಂಬೈನಲ್ಲಿ ಭಾರತ ವಿರುದ್ಧ, ಆಸ್ಟ್ರೇಲಿಯದ ಆಯಡಮ್ ಗಿಲ್ಕ್ರಿಸ್ಟ್ 2000ರಲ್ಲಿ ಹ್ಯಾಮಿಲ್ಟನ್ನಲ್ಲಿ ನ್ಯೂಝಿಲೆಂಡ್ನ ವಿರುದ್ಧ 10 ಆಟಗಾರರನ್ನು ಔಟ್ ಮಾಡಿದ್ದರು. ಇಂಗ್ಲೆಂಡ್ನ ಜಾಕ್ ರಸ್ಸಲ್(ದ.ಆಫ್ರಿಕ ವಿರುದ್ಧ 1995) ಹಾಗೂ ದಕ್ಷಿಣ ಆಫ್ರಿಕದ ಎಬಿ ಡಿವಿಲಿಯರ್ಸ್(ಪಾಕ್ ವಿರುದ್ಧ 2013) ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ಕ್ಯಾಚ್ಗಳನ್ನು (11)ಪಡೆದು ವಿಕೆಟ್ಕೀಪಿಂಗ್ನಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.