ಸ್ಟೇಟ್ ಬ್ಯಾಂಕ್ ನ ಉಳಿತಾಯ ಖಾತೆಯಲ್ಲಿನ ಕನಿಷ್ಠ ಮೊತ್ತವನ್ನು 3000 ರೂಗಳಿಗೆ ನಿಗದಿ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ

Kannada News, Regional No Comments on ಸ್ಟೇಟ್ ಬ್ಯಾಂಕ್ ನ ಉಳಿತಾಯ ಖಾತೆಯಲ್ಲಿನ ಕನಿಷ್ಠ ಮೊತ್ತವನ್ನು 3000 ರೂಗಳಿಗೆ ನಿಗದಿ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ 19

ಮೈಸೂರು: ಸ್ಟೇಟ್ ಬ್ಯಾಂಕ್ ನ ಉಳಿತಾಯ ಖಾತೆಯಲ್ಲಿನ ಕನಿಷ್ಠ ಮೊತ್ತವನ್ನು 3000 ರೂಗಳಿಗೆ ನಿಗದಿ ಮಾಡಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆಯಿಂದ ಪ್ರತಿಭಟನೆ ನಡೆಯಿತು.

ನಗರದ ಎಸ್ ಬಿ ಐ ಬ್ಯಾಂಕ್ ಮುಂಭಾಗ ಜಮಾಹಿಸಿದ ಸೇನಾ ಕಾರ್ಯಕರ್ತರು ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಮಾತನಾಡಿ ಭಾರತೀಯ ಸ್ಟೇಟ್ ಬ್ಯಾಂಕ್ ಭಾರತ ದೇಶದ ಸರಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಆಗಿದ್ದು ಕಳೆದ ವರ್ಷ ಎಲ್ಲಾ ಸ್ಟೇಟ್ ಬ್ಯಾಂಕ್ ( ನಮ್ಮ ಸ್ಟೇಟ್ ಬ್ಯಾಂಕ್ಆ ಫ್ ಮೈಸೂರು )ಗಳನ್ನು ಅದರಲ್ಲಿ ವಿಲೀನಗಳಿಸಿಕೊಂಡಿತು. ಅದಲ್ಲದೆ ಈಗ ಉಳಿತಾಯ ಖಾತೆ ಯಲ್ಲಿನ ಕನಿಷ್ಠ ಮೊತ್ತವನ್ನು 3,000 ರೂ ಗಳನ್ನು ನಿಗದಿತ ಮಾಡಿರುವುದು ಜನ ಸಾಮಾನ್ಯರ ಪಾಲಿಗೆ ನುಂಗಲಾರದ ತುತ್ತಾಗಿದೆ. ಇದರಿಂದ ದೇಶದ ಸಾಮಾನ್ಯ ವರ್ಗದ ಬಡ, ನಿರ್ಗತಿಕ ಜನರು ತಮ್ಮ ಉಳಿತಾಯದ ಖಾತೆಯಲ್ಲಿ ಕನಿಷ್ಠ 3,000 ರೂ ಮೊತ್ತವನ್ನು ನಿಭಾಯಿಸಲಾರದೆ ಹಾಗೂ ತಿಂಗಳು ತಿಂಗಳೂ ಬ್ಯಾಂಕ್ ವಿಧಿಸುವ ದಂಡಕ್ಕೆ ಕಂಗಾಲಾಗಿದ್ದಾರೆ.

ಭಾರತೀಯ ಸ್ಟೇಟ್ ಬ್ಯಾಂಕ್ ಬಡ ಜನರ ಸಾವಿರಾರು ರೂಪಾಯಿಗಳನ್ನು ಡಂಡದ ರೂಪದಲ್ಲಿ ನುಂಗಿ ನೀರು ಕುಡಿದಿದೆ. ಪ್ರಸ್ತುತ ಈ 2017 – 18 ನೇ ಸಾಲಿನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಸುಮಾರು 1,771.67 ಕೋಟಿ ರೂಗಳನ್ನು ಕನಿಷ್ಠ ಮೊತ್ತವನ್ನು ಇಡದಿದ್ದವರ ಖಾತೆಯಿಂದ ದಂಡ ವಸೂಲಿ ಮಾಡಿದೆ. ಈ ರೀತಿ ಬಡ, ಸಾಮಾನ್ಯ ಜನರಿಗೆ ಅವೈಜ್ಞಾನಿಕವಾಗಿ ದಂಡ ವಿಧಿಸುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ನಮ್ಮ ದೇಶದ ಪ್ರಧಾನಿ ಯವರು ” ಡಿಜಿಟಲ್ ಇಂಡಿಯಾ ” ಮಾಡಲು ಹೊರಟಿದ್ದರೆ, ಭಾರತೀಯ ಸ್ಟೇಟ್ ಬ್ಯಾಂಕ್ ನವರು ಜನಸಾಮಾನ್ಯರು ಬ್ಯಾಂಕಿಗೆ ಬಾರದ ಹಾಗೆ ಮಾಡುತ್ತಿದ್ದಾರೆ. ( ಉಳಿತಾಯ ಖಾತೆ ಕನಿಷ್ಠಮೊತ್ತವನ್ನು ನಿಭಾಯಿಸಲಾರದೆ ಮೇಲೆ ದಂಡ ವಿಧಿಸಿ ಹಗಲು ದರೋಡೆ ) ಮಾಡುತ್ತಿದ್ದಾರೆ.

ಕೇಂದ್ರ ಸರ್ಕಾರ ಈ ಕೂಡಲೇ ಈ ಕನಿಷ್ಠ ಮೊತ್ತದ ನಿಯಮದ ಮೇಲೆ ಕಡಿವಾಣ ಹಾಕಿ ಎಲ್ಲಾ ಬ್ಯಾಂಕುಗಳು ಉಳಿತಾಯ ಖಾತೆ ಕನಿಷ್ಠ ಮೊತ್ತವನ್ನೇ ರದ್ದು ಮಾಡಬೇಕು. ಜೀರೊ ಬ್ಯಾಲನ್ಸ್ ಮಾಡಬೇಕು. ಇದರಿಂದ ಜನರು ದಂಡದ ಭಯವಿಲ್ಲದೆ ಹೆಚ್ಚು ಹೆಚ್ಚು ವಹಿವಾಟುಗಳನ್ನು ಮಾಡುವರು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವುದು ಎಂದು ಒತ್ತಾಯಿಸಿ ಇಲ್ಲಿನ ಮ್ಯಾನೇಜರ್ ಮೂಲಕ ಭಾರತೀಯ ಸ್ಟೇಟ್ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಪ್ರಧಾನ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಗುವುದು ಎಂದರು.

ಪ್ರತಿಭಟನೆ ನೇತೃತ್ವ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು, ನಗರಾಧ್ಯಕ್ಷ ಪ್ರಜೀಶ್, ಶಾಂತಮೂರ್ತಿ, ಸುನಿಲ್, ಜಗದೀಶ್, ಮನುನಾಯಕ್, ಗುರುಮಲ್ಲಪ್ಪ, ನಂಜುಂಡಸ್ವಾಮಿ, ಮಿನಿಬಂಗಾರಪ್ಪ, ಶ್ರೀನಿವಾಸ್ ರಾಜಕುಮಾರ್, ಹರೀಶ್, ರಾಧಾಕೃಷ್ಣ, ಗುರುಶಂಕರ್, ಆನಂದ್, ರಾಘವೇಂದ್ರ ಎಂ, ಸ್ವಾಮಿ, ಮೂರ್ತಿ, ತಿಪ್ಪಯ್ಯ, ಪುಟ್ಟು, ನಾಜೀರ್, ಶಬ್ಬೀರ್ ಇನ್ನಿತರರು ಇದ್ದರು.

Related Articles

Leave a comment

Back to Top

© 2015 - 2017. All Rights Reserved.