ಫಿಲ್ಮ್ ಫೇರ್ ಮ್ಯಾಗಝೀನ್ ಮುಖಪುಟದಲ್ಲಿ ‘ವಿರುಷ್ಕ’ ಫುಲ್ ಮಿಂಚಿಂಗ್

Kannada News, Sports No Comments on ಫಿಲ್ಮ್ ಫೇರ್ ಮ್ಯಾಗಝೀನ್ ಮುಖಪುಟದಲ್ಲಿ ‘ವಿರುಷ್ಕ’ ಫುಲ್ ಮಿಂಚಿಂಗ್ 32

ನವದೆಹಲಿ: ಕಳೆದ ವರ್ಷ ಹೆಚ್ಚು ಸುದ್ದಿ ಮಾಡಿದ ಜೋಡಿ ಅಂದ್ರೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ. ಯಾರಿಗೂ ತಿಳಿಯದಂತೆ ಇಟಲಿಯಲ್ಲಿ ನಡೆದ ಸ್ಟಾರ್ ಜೋಡಿಯ ವೈಭವೋಪೇತ ಮದುವೆ ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಇದೀಗ ಫಿಲ್ಮ್ ಫೇರ್ ಮ್ಯಾಗಝೀನ್ ನ ಜನವರಿ ಆವೃತ್ತಿಯಲ್ಲಿ ಇಬ್ಬರೂ ಮಿಂಚ್ತಿದ್ದಾರೆ. ಮ್ಯಾಗಝೀನ್ ಕವರ್ ಪೇಜ್ ನಲ್ಲಿ ಅನುಷ್ಕಾ ಹಾಗೂ ವಿರಾಟ್ ಕಾಣಿಸಿಕೊಂಡಿದ್ದಾರೆ.

ಅನುಷ್ಕಾ ಸಬ್ಯಸಾಚಿ ವಿನ್ಯಾಸ ಮಾಡಿರೋ ಮರೂನ್ ಗೋಲ್ಡನ್ ವೆಲ್ವೆಟ್ ಸೀರೆಯಲ್ಲಿ ಹಾಗೂ ವಿರಾಟ್ ನೀಲಿ ಬಣ್ಣದ ಸೂಟ್ ನಲ್ಲಿ ಸಖತ್ ಹ್ಯಾಂಡ್ಸಮ್ ಆಗಿ ಕಾಣ್ತಿದ್ದಾರೆ. ಹೆವಿ ಜ್ಯುವೆಲರಿ, ಸಾಂಪ್ರದಾಯಿಕ ಕೇಶ ವಿನ್ಯಾಸ, ಒಂದೇ ಒಂದು ಕೆಂಪು ಗುಲಾಬಿ ಅನುಷ್ಕಾ ಸೌಂದರ್ಯವನ್ನು ದ್ವಿಗುಣಗೊಳಿಸಿದೆ.

ಅನುಷ್ಕಾಳ ಸೌಂದರ್ಯಕ್ಕೆ ವಿರಾಟ್ ಕೊಹ್ಲಿಯೇ ಮರುಳಾಗಿದ್ದರು. ಇದೀಗ ಈ ಜೋಡಿಯ ಪ್ರೀತಿಯ ನೋಟ ಕ್ಯಾಮರಾದಲ್ಲಿ ಸೆರೆಯಾಗಿದೆ. ಇವರಿಬ್ಬರೂ ಹೊಸ ಟ್ರೆಂಡ್ ಅನ್ನೇ ಸೃಷ್ಟಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.