ಪಾಟ್ನಾ ರೈಲಿನಲ್ಲಿ ಅಗ್ನಿ ದುಂರತ: 5 ಬೋಗಿ, 1 ಇಂಜಿನ್ ಭಸ್ಮ

Kannada News, National No Comments on ಪಾಟ್ನಾ ರೈಲಿನಲ್ಲಿ ಅಗ್ನಿ ದುಂರತ: 5 ಬೋಗಿ, 1 ಇಂಜಿನ್ ಭಸ್ಮ 19

ಪಾಟ್ನಾ: ಬಿಹಾರದ ರೈಲು ನಿಲ್ದಾಣವೊಂದರಲ್ಲಿ ನಿಂತಿದ್ದ ರೈಲಿನಲ್ಲಿ ಅಗ್ನಿ ದುಂರತ ಸಂಭವಿಸಿದ್ದು, 5 ಬೋಗಿ ಹಾಗೂ 1 ಇಂಜಿನ್​ ಸುಟ್ಟು ಭಸ್ಮವಾಗಿವೆ.

ಬಿಹಾರದ ಮೋಕಾಮ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮಂಗಳವಾರ ರಾತ್ರಿ ಪಾಟ್ನಾದಿಂದ 10.30ರ ವೇಳೆಗೆ ಮೋಕಾಮಗೆ ಬಂದು ತಲುಪಿದ ರೈಲು ಪ್ಲಾಟಫಾರ್ಮ್​ 4ರಲ್ಲಿ ನಿಂತಿತ್ತು. ಬುಧವಾರ ಮುಂಜಾವು 1 ಗಂಟೆಯ ವೇಳೆಗೆ ಇದಕ್ಕಿದ ಹಾಗೆ ಒಂದು ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿಯ ಕೆನ್ನಾಲಿಗೆ ಮತ್ತೆ 4 ಬೋಗಿಗಳು ಹಾಗೂ ಇಂಜಿನ್​ಗೆ ಹಬ್ಬಿ ಹೊತ್ತಿಉರಿದಿದೆ.

ರಕ್ಷಣಾ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಅನಾಹುತದಿಂದ ಉಳಿದ ರೈಲುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.