ದಲಿತ ಸಮುದಾಯದ ಮನೆಗೆ ನುಗ್ಗಿ ಧಮ್ಕಿ, ದಾಂಧಲೆ: ಹಿಂದೂ ಸಂಘಟನೆ ಮುಖಂಡರ ಬಂಧನ

Crime, Kannada News, Regional No Comments on ದಲಿತ ಸಮುದಾಯದ ಮನೆಗೆ ನುಗ್ಗಿ ಧಮ್ಕಿ, ದಾಂಧಲೆ: ಹಿಂದೂ ಸಂಘಟನೆ ಮುಖಂಡರ ಬಂಧನ 15

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಪುಂಡರು ದಲಿತ ಸಮುದಾಯದ ಮನೆಯೊಂದಕ್ಕೆ ನುಗ್ಗಿ ದಾಂಧಲೆ ಮಾಡಿದ್ದಾರೆ.

ತಾಯಿ ಮತ್ತು ಅಪ್ರಾಪ್ತ ಮಗಳಿಗೆ ಜೀವ ಬೆದರಿಕೆ ಹಾಕಿದ್ದು ತಡೆಯಲು ಬಂದವರ ಮೇಲೆ ಹಲ್ಲೆ ನಡೆಸಿದ್ದಾರೆ. ಮುಸ್ಲಿಂ ಯುವಕನ ಜೊತೆಗೆ ಮಾತಾಡಿದರೆ ಸಾಯಿಸ್ತೇವೆ. ಒಂದು ವೇಳೆ ನಿಮಗೆ ಬದುಕ್ಬೇಕು ಅಂತಿದ್ರೆ ಊರು ಬಿಟ್ಟು ಹೋಗಿ ಎಂದು ಧಮ್ಕಿ ಹಾಕಿದ್ದಾರೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೂಡಲೆ ಎಚ್ಚೆತ್ತ ಪೊಲೀರು ಘಟನೆಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಯ ಮುಖಂಡರಾದ ರಮೇಶ್ (48) ಹಾಗೂ ಆಟೋ ರಿಕ್ಷಾ ಚಾಲಕ ಉಮೇಶ (33) ಎಂಬುವರನ್ನು ಬಂಧಿಸಲಾಗಿದೆ. ಉಮೇಶ್ ಸಹೋದರ ರಾಜೇಶ್ ಹಾಗೂ ಈತನ ಸ್ನೇಹಿತ ಪರಾರಿಯಾಗಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.