ಶಿಕ್ಷಣ ಸಚಿವ ತನ್ವೀರ್ ಸೇಠ್’ಗೆ ಕೊಲೆ ಬೆದರಿಕೆ ಕರೆ

Crime, Kannada News, Regional, Top News No Comments on ಶಿಕ್ಷಣ ಸಚಿವ ತನ್ವೀರ್ ಸೇಠ್’ಗೆ ಕೊಲೆ ಬೆದರಿಕೆ ಕರೆ 20

ಬೆಂಗಳೂರು: ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಕೊಲೆ ಬೆದರಿಕೆಯ ಕರೆ ಸಂದೇಶ ಬಂದಿದೆ. ಭೂಗತ ಪಾತಿಯ ಹೆಸರಿನಲ್ಲಿ ಕರೆ ಮಾಡಿ 10 ಕೋಟಿ ರೂಪಾಯಿ ನೀಡುವಂತೆಯೂ, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕಹಾಕಿದ್ದಾನೆ ಎಂದು ಹೇಳಲಾಗಿದೆ.

ಬೆದರಿಕೆಯ ಕರೆ ಬಂದ ಹಿನ್ನಲೆ ಸಚಿವರು ರಾಜ್ಯ ಡಿಜಿ ಮತ್ತು ಐಜಿಪಿ ನೀಲಮಣಿ ಎನ್.ರಾಜು ಅವರಿಗೆ ದೂರು ನೀಡಿದ್ದಾರೆ. ವಿದೇಶದ ದೂರವಾಣಿ ಸಂಖ್ಯೆಯಿಂದ ಸಚಿವರಿಗೆ ಬೆದರಿಕೆ ಕರೆಗಳು ಮತ್ತು ಸಂದೇಶಗಳು ಬರುತ್ತಿದ್ದು, ಇಂಟರ್ನೆಟ್ ಕಾಲ್ ಗಳು ಸಹ ಬರುತ್ತಿವೆ ಎಂದು ಹೇಳಿದ್ದಾರೆ.

ಕರೆ ಮಾಡುತ್ತಿರುವ ವ್ಯಕ್ತಿ ತನ್ನನ್ನು ತಾನು ರವಿ ಪೂಜಾರಿ ಎಂದು ಹೇಳಿಕೊಳ್ಳುತ್ತಿದ್ದು, ಕೂಡಲೇ 10 ಕೋಟಿ ರೂಪಾಯಿ ನೀಡಬೇಕು, ಹಣ ಕೊಡದಿದ್ದರೆ ನಮ್ಮ ಜನ ನಿಮ್ಮನ್ನು ಸಾಯಿಸುತ್ತಾರೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಸಚಿವ ಸೇಠ್ ಕೊಟ್ಟಿರುವ ದೂರು ಸೈಬರ್ ಕ್ರೈಂ ವಿಭಾಗಕ್ಕೆ ವರ್ಗಾವಣೆ ಆಗಿದೆ.

Related Articles

Leave a comment

Back to Top

© 2015 - 2017. All Rights Reserved.