ತಮ್ಮ ಫಸ್ಟ್‌ ಲವ್‌ ಬಗ್ಗೆ ಮಾತನಾಡಿದ ರಜಿನೀಕಾಂತ್

Entertainment, Kannada News No Comments on ತಮ್ಮ ಫಸ್ಟ್‌ ಲವ್‌ ಬಗ್ಗೆ ಮಾತನಾಡಿದ ರಜಿನೀಕಾಂತ್ 27

ಸಿನೆಮಾ: ಸೂಪರ್‌ಸ್ಟಾರ್‌ ರಜನೀಕಾಂತ್‌ ಅವರು ಮೊದಲ ಬಾರಿಗೆ ತಮ್ಮ ಮೊದಲ ಪ್ರೇಮದ ಬಗ್ಗೆ ಮಾತನಾಡಿದ್ದಾರೆ.

ಹೌದು. ಮಲೇಷ್ಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೊದಲ ಪ್ರೇಮದ ಕುರಿತು ಪ್ರಶ್ನೆಯೊಂದು ಕೇಳಿಬಂತು, ಇದಕ್ಕುತ್ತರಿಸಿದ ರಜನೀ, ಹೌದು. ನಾನು ಕೂಡಾ ಪ್ರೀತಿಯಲ್ಲಿ ಬಿದ್ದಿದ್ದೆ. ಕರ್ನಾಟಕದಲ್ಲಿ ನಾನು ಶಾಲೆಗೆ ಹೋಗುತ್ತಿದ್ದಾಗ ನನಗೆ ಮೊದಲ ಪ್ರೇಮದ ಅನುಭವವಾಗಿದೆ. ನಾನದನ್ನು ಎಂದೂ ಮರೆಯಲಾರೆ ಎಂದಿದ್ದಾರೆ.

ಪ್ರತಿಯೊಬ್ಬರ ಫಸ್ಟ್‌ ಲವರ್‌ನ ಹೆಸರು ಅವರ ಮನದಲ್ಲಿ ಸದಾ ಶಾಶ್ವತವಾಗಿರುತ್ತದೆ. ಹಲವರು ತಮ್ಮ ಮೊದಲ ಪ್ರೇಮದಲ್ಲಿ ಯಶ ಕಂಡುಕೊಂಡರೆ, ಕೆಲವರು ವಿಫಲರಾಗುತ್ತಾರೆ. ನಾನು ನನ್ನ ಫಸ್ಟ್‌ ಲವ್‌ನಲ್ಲಿ ವಿಫಲನಾಗಿದ್ದೇನೆ ಎಂದು ಅವರು ವಿವರಿಸಿದ್ದಾರೆ. ಆದರೆ ಮೊದಲ ಪ್ರೇಮಿಯ ಹೆಸರನ್ನು ಹೇಳಲು ನಿರಾಕರಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.