ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ತಕ್ಕದಾದ ಮಾತುಗಳನ್ನಾಡಬೇಕಲ್ಲವೇ: ಡಾ. ಮಂಜುನಾಥ್ ಬಿ‌.ಹೆಚ್

Kannada News, Regional, Top News No Comments on ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ತಕ್ಕದಾದ ಮಾತುಗಳನ್ನಾಡಬೇಕಲ್ಲವೇ: ಡಾ. ಮಂಜುನಾಥ್ ಬಿ‌.ಹೆಚ್ 43

ಮೈಸೂರು: 88 ವರ್ಷಗಳಿಂದ ರಾಷ್ಟ್ರ ಜಾಗೃತಿಯಲ್ಲಿ ಹಾಗೂ ದೇಶ ಕಟ್ಟುವ ಕೆಲಸ ಮಾಡುತ್ತಿರುವ ಏಕೈಕ ಸಂಘಟನೆ ಎಂದರೆ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಇಂತಹ ಸಂಘಟನೆ ವಿರುದ್ಧ ಸಿಎಂ ವಿವಾದತ್ಮಕ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಬಿಜೆಪಿಯ ಮೈಸೂರು ನಗರ ಜಿಲ್ಲಾಧ್ಯಕ್ಷರಾದ ಡಾ| ಮಂಜುನಾಥ್ ಬಿ‌ ಹೆಚ್ ಅವರು ಕಿಡಿ ಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಜಿಜೆಪಿ, ಆರ್.ಎಸ್.ಎಸ್, ಭಜರಂಗದಳದವರೇ ಉಗ್ರಗಾಮಿಗಳು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಸ್ವಾತಂತ್ರ್ಯಾನಂತರದ ದಿನಗಳಲ್ಲಿ ನೆಹರೂ ಸರ್ಕಾರ ವಿವಿಧ ಷಡ್ಯಂತ್ರಗಳನ್ನು ನಡೆಸಿ ಸಂಘವನ್ನು ನಿಷೇಧಿಸುವ ಪ್ರಯತ್ನವನ್ನು ಮಾಡಿತ್ತು. ಅದಾದ ಬಳಿಕವೂ ಕಾಂಗ್ರೆಸ್ ಪಕ್ಷ ಅದೇ ಕೆಲಸವನ್ನು ಮಾಡುತ್ತಾ ಬಂದಿದೆ. ಅದಕ್ಕೆ ಹೊಸ ಸೇರ್ಪಡೆ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಚಾಮರಾಜನಗರದಲ್ಲಿ ಮಾತನಾಡುತ್ತಾ ರಾಷ್ಟ್ರೀಯ ಸ್ವಯಂಸೇವಕ ಸಂಘ ಬಿಜೆಪಿ ಹಾಗೂ ಬಜರಂಗದಳದ ಕಾರ್ಯಕರ್ತರನ್ನು ಭಯೋತ್ಪಾದಕರು ಎಂದಿದ್ದಾರೆ.

ಸಿದ್ದರಾಮಯ್ಯನವರಿಂದ ಇಂತಹ ಮಾತುಗಳಲ್ಲದೇ ಬೇರೇನನ್ನೂ ನಾವು ಎದುರು ನೋಡಲು ಸಾಧ್ಯವಿಲ್ಲ. ಆದರೆ ಕನಿಷ್ಠ ಪಕ್ಷ ತಾನು ಹೊಂದಿರುವ ಮುಖ್ಯಮಂತ್ರಿ ಸ್ಥಾನಕ್ಕೆ ತಕ್ಕದಾದ ಮಾತುಗಳನ್ನಾದರೂ ಆಡಬೇಕಲ್ಲವೇ..?

ಇತ್ತೀಚೆಗಷ್ಟೇ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ ಟಿ ಥಾಮಸ್‌ ಅವರು ಸಂವಿಧಾನ ಹಾಗೂ ಸೈನ್ಯದ ನಂತರ ದೇಶವನ್ನು ರಕ್ಷಿಸುತ್ತಿರುವುದು ಆರೆಸ್ಸೆಸ್ ಎಂಬುದಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಈಗಾಗಲೇ 21 ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾಗಿದೆ. ಈ ಹತ್ಯೆಗಳಲ್ಲಿ ಪಿಎಫ್ಐ ಸಂಘಟನೆಯ ಪಾತ್ರ ಸಾಬೀತಾಗಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಮುಖ್ಯಮಂತ್ರಿಗಳು ಅವರ ವಿರುದ್ಧ ಇದುವರೆಗೆ ಒಂದೇ ಒಂದು ಮಾತನ್ನೂ ಆಡಿಲ್ಲ. ಆರೆಸ್ಸೆಸ್ ಹಾಗೂ ಬಿಜೆಪಿ ವಿರುದ್ಧ ಹೀಗೆ ಅದೆಷ್ಟೋ ಮಂದಿ ಕತ್ತಿ ಮಸೆದರೂ ಸಂಘಟನೆಯ ದೇಶಭಕ್ತಿಯನ್ನು ಕುಂದಿಸಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಸಿದ್ದರಾಮಯ್ಯನವರು ನೀಡುತ್ತಿರುವ ಇಂತಹ ಬೇಜವಾಬ್ದಾರಿಯುತ ಹಾಗೂ ಬಾಲಿಶ ಹೇಳಿಕೆಗಳನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.