ಇಸ್ರೋ’ದ ನೂತನ ಅಧ್ಯಕ್ಷರಾಗಿ ಸಿವನ್.ಕೆ ನೇಮಕ

BREAKING NEWS, Kannada News, National, Top News No Comments on ಇಸ್ರೋ’ದ ನೂತನ ಅಧ್ಯಕ್ಷರಾಗಿ ಸಿವನ್.ಕೆ ನೇಮಕ 38

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ(ಇಸ್ರೋ)ಯ ನೂತನ ಅಧ್ಯಕ್ಷರನ್ನಾಗಿ ಸಿವನ್ ಕೆ ಅವರನ್ನು ನೇಮಕ ಮಾಡಲಾಗಿದೆ.

ಜನವರಿ 12, 2015ರಲ್ಲಿ ಇಸ್ರೋ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಕನ್ನಡಿಗ, ಆಲೂರು ಸೀಳಿನ್‌ ಕಿರಣ್‌ ಕುಮಾರ್‌ ಅವರ ಅಧಿಕಾರವಧಿ ಮುಗಿದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿದ್ದ ಸಿವನ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.

ಸಿವಾನ್ ಕೆ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಬಾಹ್ಯಾಕಾಶ ಇಲಾಖೆಯ ನೂತನ ಕಾರ್ಯದರ್ಶಿ ಮತ್ತು ಇಸ್ರೋದ ಮುಖ್ಯಸ್ಥರಾಗಿ ನೇಮಕ ಮಾಡಲು ಸಂಪುಟ ನೇಮಕ ಸಮಿತಿ ಒಪ್ಪಿಗೆ ಸೂಚಿಸಿದೆ ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದೆ.

ಮದ್ರಾಸ್‌ ಐಐಟಿಯಲ್ಲಿ 1980ರಲ್ಲಿ ಏರೋನಾಟಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದಿರುವ ಶಿವನ್‌ ನಂತರ ಬೆಂಗಳೂರಿನ ಐಐಎಸ್‌ಸಿಯಲ್ಲಿ ಏರೋಸ್ಪೇಸ್‌ ಎಂಜನಿಯರಿಂಗ್‌ ಪದವಿ ಪಡೆದಿದ್ದಾರೆ. ಐಐಟಿ ಬಾಂಬೆಯಲ್ಲಿ 2006ರಲ್ಲಿ ಏರೋಸ್ಪೇಸ್‌ ಎಂಜನಿಯರಿಂಗ್‌ನಲ್ಲಿ ಪಿಎಚ್‌ಡಿ ಕೂಡ ಪಡೆದುಕೊಂಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.