ಗೊಮಟೇಶ್ವರನ ಮಾನವನ್ನು ಮುಚ್ಚಲು ಚಡ್ಡಿಯಾದರೂ ಹಾಕಿ: ಸಿಎಂ’ಗೆ ಪತ್ರಕರ್ತನ ಪತ್ರ

BREAKING NEWS, Kannada News, Regional, Top News No Comments on ಗೊಮಟೇಶ್ವರನ ಮಾನವನ್ನು ಮುಚ್ಚಲು ಚಡ್ಡಿಯಾದರೂ ಹಾಕಿ: ಸಿಎಂ’ಗೆ ಪತ್ರಕರ್ತನ ಪತ್ರ 40

ಬೆಂಗಳೂರು: ಮಾನ ಮುಚ್ಚಲು ಬಾಹುಬಲಿ ಪತ್ರಿಮೆಗೆ ಬಟ್ಟೆ ಹಾಕುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರಕರ್ತರೊಬ್ಬರು ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.

ಪ್ರಭು ಎಂಬವರು ಸಿದ್ದರಾಮಯ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರಿಗೂ ಈ ಪತ್ರ ಬರೆದು ಬಟ್ಟೆ ಹಾಕುವಂತೆ ಮನವಿ ಮಾಡಿದ್ದಾರೆ.

ಪತ್ರದಲ್ಲಿ ಏನಿದೆ..?

ದಿನದಿಂದ ದಿನಕ್ಕೆ ಮಾನವನ ಜೀವನದ ಶೈಲಿಗಳು, ಮಾನವನ ವಿಕಾಸವೂ ಉನ್ನತೀಕರಣವಾಗಿ ಪ್ರತಿಯೊಬ್ಬರೂ ಜೀವನದ ಮೌಲ್ಯಗಳನ್ನು ತಿಳಿದುಕೊಂಡು, ತಂತ್ರಜ್ಞಾನದಿಂದ ಜಗತ್ತಿನ ಆಗುಹೋಗುಗಳನ್ನು ಕ್ಷಣಮಾತ್ರದಲ್ಲಿ ತಿಳಿದುಕೊಳ್ಳುವ ಇಂತಹ ಸಂದರ್ಭದಲ್ಲಿ ಜೈನ ಧರ್ಮಗುರು ಬಾಹುಬಲಿಯವರು 9ನೇ ಶತಮಾನದಲ್ಲಿ ದಿಗಂಬರರಾಗಿದ್ದರು ಎನ್ನುವ ಕಾರಣದಿಂದ ಅಲ್ಲಿಂದ ಇಲ್ಲಿಯವರೆಗೆ ಧರ್ಮಗುರು ಬಾಹುಬಲಿಯವರನ್ನು ಹಾಗೆಯೇ ದಿಗಂಬರರಾಗಿ ಉಳಿಸಿಕೊಂಡಿರುವುದು ಒಂದು ವಿಪರ್ಯಾಸವೇ ಆಗಿದೆ. ಇದು ಮೌಢ್ಯತೆಗೆ ಹಿಡಿದ ಕನ್ನಡಿಯಾಗಿದೆ.

ಆಗಿನ ಸಂದರ್ಭದಲ್ಲಿ ಧರ್ಮಗುರು ಬಾಹುಬಲಿಯವರು ತೆಗೆದುಕೊಂಡಂತ ನಿರ್ಧಾರವು ಅವರಿಗೆ ಸರಿ ಅನಿಸಿರಬಹುದು. ಆದರೆ ಅಂದಿನಿಂದ ಇಂದಿನವರೆಗೆ ಮಾನವನ ವಿಕಾಸದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅಲ್ಲದೇ ಮಾನವನ ಪ್ರಗತಿಯು ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಾ ಸಾಗಿದೆ.

ಹೀಗಾಗಿ ದಿಗಂಬರರಾಗಿರುವ ಬಾಹುಬಲಿಯನ್ನು ನೋಡೋದಕ್ಕೆ ಅಸಹ್ಯ ಅನಿಸುತ್ತದೆ. ಈ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ಇದರ ಬಗ್ಗೆ ಗಮನ ಹರಿಸಿ ಬಟ್ಟೆ ಹಾಕಲಿ. ಕಾಲ ಈಗ ಬದಲಾಗಿದೆ, ಬಾಹುಬಲಿನಾ ನೋಡೋಕೆ ಕಷ್ಟವಾಗಲಿದೆ. ಇದರಿಂದ ಧಾರ್ಮಿಕ ನಂಬಿಕೆಯ ವಿಚಾರ ಬರೋದಿಲ್ಲ. ಕನಿಷ್ಠ ಗೊಮಟೇಶ್ವರನ ಮಾನವನ್ನು ಮುಚ್ಚಲು ಚಡ್ಡಿಯಾದರೂ ಹಾಕಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

 

Related Articles

Leave a comment

Back to Top

© 2015 - 2017. All Rights Reserved.