ಸಾ.ರಾ.ಗೋವಿಂದ್’ಗೆ ಥ್ಯಾಂಕ್ಸ್ ಹೇಳಿದ ಎಸ್ ನಾರಾಯಣ: ಕಾರಣವೇನು ಗೊತ್ತಾ..!

Entertainment, Kannada News No Comments on ಸಾ.ರಾ.ಗೋವಿಂದ್’ಗೆ ಥ್ಯಾಂಕ್ಸ್ ಹೇಳಿದ ಎಸ್ ನಾರಾಯಣ: ಕಾರಣವೇನು ಗೊತ್ತಾ..! 36

ಸಿನಿಮಾ: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಏಕೆಂದರೆ, 2 ವರ್ಷಗಳಿಂದ ಸತಾಯಿಸುತ್ತಿದ್ದ 20 ಲಕ್ಷ ರೂ. ಹಣ ಅವರಿಗೆ ವಾಪಸ್ ಆಗಿದೆ. ಅದು ಸಾ.ರಾ.ಗೋವಿಂದು ಅವರ ಸಲಹೆಯ ಮೂಲಕ.

ಹೌದು. 2015ರಲ್ಲಿ ಎಸ್.ನಾರಾಯಣ್, ಧನುಷ್ ಅಭಿನಯದ ತೊಡಾರಿ ಚಿತ್ರದ ಕರ್ನಾಟಕದ ವಿತರಣೆಯ ಹಕ್ಕು ಪಡೆದುಕೊಂಡಿದ್ದರು. 25 ಲಕ್ಷ ರೂ. ಕೊಟ್ಟಿದ್ದರು. ಆದರೆ, ವ್ಯವಹಾರದಲ್ಲಿ ಏರುಪೇರಾಗಿ ಸತ್ಯಜ್ಯೊತಿ ಫಿಲಂಸ್‍ನವರು ನಾರಾಯಣ್ ಅವರಿಗೆ 5 ಲಕ್ಷ ರೂ. ವಾಪಸ್ ಕೊಟ್ಟು, ಉಳಿದ ಹಣವನ್ನು ಮತ್ತೆ ನೀಡುವುದಾಗಿ ತಿಳಿಸಿದ್ದರು. ಆದರೆ, ಮರೆತೇಬಿಟ್ಟಿದ್ದರು.

ಇತ್ತೀಚೆಗೆ ಅದೇ ಸತ್ಯಜ್ಯೋತಿ ಫಿಲಂಸ್‍ನವರ ವೇದಂ ಸಿನಿಮಾ ರಿಲೀಸ್ ಆದಾಗ, ಆ ಚಿತ್ರದ ವಿತರಣೆಯ ಹಕ್ಕನ್ನು ಪಡೆದವರು ಮೆ. ಬೃಂದಾ ಅಸೋಸಿಯೇಟ್ಸ್‍ನ ಗೋಪಿ. ಇದನ್ನು ನಾರಾಯಣ್ ತಕ್ಷಣ ಫಿಲಂ ಚೇಂಬರ್ ಗಮನಕ್ಕೆ ತಂದು ದೂರು ಕೊಟ್ಟರು. ಮಧ್ಯಸ್ಥಿಕೆ ವಹಿಸಿದ ಫಿಲಂ ಚೇಂಬರ್, ಈಗ ನಾರಾಯಣ್ ಅವರಿಗೆ ಬರಬೇಕಿದ್ದ 20 ಲಕ್ಷ ರೂ. ಹಣ ವಾಪಸ್ ಬರುವಂತೆ ಮಾಡಿದೆ. ಇದೇ ಕಾರಣಕ್ಕೆ ನಾರಾಯಣ್ ಥ್ಯಾಂಕ್ಸ್ ಹೇಳಿರುವುದು.

Related Articles

Leave a comment

Back to Top

© 2015 - 2017. All Rights Reserved.