ಕೊಲ್ಲೂರಮ್ಮನ ಸನ್ನಿಧಿಯಲ್ಲಿ ಸಂಗೀತ ಸೇವೆ ನೀಡಿ ಹುಟ್ಟುಹಬ್ಬ ಆಚರಿಸಿಕೊಂಡ ಯೇಸುದಾಸ್

Entertainment, Kannada News No Comments on ಕೊಲ್ಲೂರಮ್ಮನ ಸನ್ನಿಧಿಯಲ್ಲಿ ಸಂಗೀತ ಸೇವೆ ನೀಡಿ ಹುಟ್ಟುಹಬ್ಬ ಆಚರಿಸಿಕೊಂಡ ಯೇಸುದಾಸ್ 5

ಉಡುಪಿ: ಸಂಗೀತ ಮಾಂತ್ರಿಕ ಕೆ.ಜೆ.ಯೇಸುದಾಸ್ ಅವರು ತನ್ನ 78 ನೇ ಹುಟ್ಟುಹಬ್ಬವನ್ನು ಕೊಲ್ಲೂರಮ್ಮನ ಮುಂದೆ ಸಂಗೀತ ಸೇವೆ ನೀಡಿ ಧಾರ್ಮಿಕವಾಗಿ ಆಚರಿಸಿಕೊಂಡಿದ್ದಾರೆ.

ಯೇಸುದಾಸ್ ಅವರು ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ಆಚರಿಸುತ್ತಾರೆ. ಕುಟುಂಬ ಸಮೇತರಾಗಿ ಆಗಮಿಸಿದ ಅವರು ತಾಯಿ ಮೂಕಾಂಬಿಕೆಯ ದರ್ಶನ ಪಡೆದು ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನದ ಪ್ರಾಂಗಣದಲ್ಲಿರುವ ಎಲ್ಲಾ ಗುಡಿಗಳಿಗೆ ಭೇಟಿಕೊಟ್ಟು ಅರ್ಚನೆಯನ್ನು ನೆರವೇರಿಸಿದರು. ಬಳಿಕ ಯಜ್ಞ ಶಾಲೆಯಲ್ಲಿ ಚಂಡಿಕಾ ಹೋಮದಲ್ಲಿ ಭಾಗಿಯಾದರು.

ದೇವಿ ಮೂಕಾಂಬಿಕೆಯ ಸನ್ನಿಧಿಯ ಒಳ ಭಾಗದಲ್ಲಿ ಯೇಸುದಾಸ್ ಸಂಗೀತ ಸೇವೆಯನ್ನು ದೇವಿಗೆ ಅರ್ಪಿಸಿದರು. ಪ್ರತಿ ವರ್ಷದಂತೆ ದೇವಸ್ಥಾನದ ಪ್ರಾಂಗಣದಲ್ಲಿ ಸಂಗೀತ ಸೇವೆ ನೀಡುವ ಮೂಲಕ ದೇವರ ನಾಮವನ್ನ ಹಾಡಿದರು.

Related Articles

Leave a comment

Back to Top

© 2015 - 2017. All Rights Reserved.