ಸರಗಳ್ಳರ ಹೆಡೆಮುರಿ ಕಟ್ಟಲು “ಆಪರೇಷನ್ ಡಿಕಾಯ್”: ಕಾರ್ಯಾಚರಣೆಯಲ್ಲಿ ಇಬ್ಬರು ಸುಲಿಗೆಕೋರರ ಬಂಧನ

Crime, Kannada News, Regional, Top News No Comments on ಸರಗಳ್ಳರ ಹೆಡೆಮುರಿ ಕಟ್ಟಲು “ಆಪರೇಷನ್ ಡಿಕಾಯ್”: ಕಾರ್ಯಾಚರಣೆಯಲ್ಲಿ ಇಬ್ಬರು ಸುಲಿಗೆಕೋರರ ಬಂಧನ 19

ಮೈಸೂರು: ನಗರದಲ್ಲಿ ಸರಗಳ್ಳತನ ಹೆಚ್ಚಾಗುತ್ತಿದ್ದು ಇದನ್ನು ತಟೆಗಟ್ಟುವ ಸಲುವಾಗಿ ಜಾರಿಗೆ ತಂದಿರುವ “ಆಪರೇಷನ್ ಡಿಕಾಯ್” ಕಾರ್ಯಾಚರಣೆಗೆ ಇಬ್ಬರು ಕಳ್ಳರು ಬಿದ್ದಿದ್ದಾರೆ.

ನಗರದಲ್ಲಿ ಮಹಿಳೆಯರು ನಡೆದುಕೊಂಡು, ದ್ವಿ ಚಕ್ರ ವಾಹನ ಮತ್ತು ಆಟೋಗಳಲ್ಲಿ ಹೋಗುವಾಗ ಬೈಕ್‍ನಿಂದ ಬಂದು ಅವರ ಮೊಬೈಲ್ ಫೋನ್, ವ್ಯಾನಿಟಿ ಬ್ಯಾಗ್‍ಗಳನ್ನು ಕಿತ್ತುಕೊಂಡು (ಸ್ನ್ಯಾಚಿಂಗ್) ಹೋಗುತ್ತಿರುವ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತರು, ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಆಭರಣ ಧರಿಸಿ, ಕೈಯಲ್ಲಿ ಮೊಬೈಲ್ ಮತ್ತು ವ್ಯಾನಿಟಿ ಹಿಡಿದುಕೊಂಡು ಸಾರ್ವಜನಿಕರಂತೆ ಬಿಂಬಿಸಿ, ಕಳ್ಳರು ಅವರಿಂದ ಮೊಬೈಲ್ ಫೋನ್, ವ್ಯಾನಿಟಿ ಬ್ಯಾಗ್ ಕಿತ್ತುಕೊಂಡು ಹೋಗುವ ಸಮಯದಲ್ಲಿ ಮಹಿಳಾ ಸಿಬ್ಬಂದಿಗಳ ಸುತ್ತ ಇರುವ ಪೊಲೀಸರು ದಾಳಿ ಮಾಡಿ ಕಳ್ಳರನ್ನು ಹಿಡಿಯುವ “ಆಪರೇಷನ್ ಡಿಕಾಯ್” ಕಾರ್ಯಾಚರಣೆಯನ್ನು ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ನಡೆಸುವಂತೆ ಸೂಚಿಸಿದ್ದರು.

ಈ ಸಂಬಂಧ ಜ. 8 ರಂದು ರಾತ್ರಿ ಮೈಸೂರು ನಗರ ವಿಜಯನಗರ ಪೊಲೀಸರು ವಿದ್ಯಾವರ್ಧಕ ಕಾಲೇಜು ರಸ್ತೆಯಲ್ಲಿ ಆಪರೇಷನ್ ಡಿಕಾಯ್ ಕಾರ್ಯಾಚರಣೆಯಲ್ಲಿದ್ದಾಗ, ಆಯಿಸ್ಟಾರ್ ಬೇ ಹೋಟೆಲ್ ಬಳಿ ಮಹಿಳಾ ಸಿಬ್ಬಂದಿಯಿಂದ ಮೊಬೈಲ್ ಫೋನ್ ಕಿತ್ತುಕೊಂಡು ಹೋಗಲು ಪ್ರಯತ್ನಿಸಿದ- ಸನ್ನಿ ಡೊನಾಲ್ಡ್ ಬಿನ್ ಡೇವಿಡ್ ರಾಜಶೇಖರ್, (24 ವರ್ಷ, ನಾಯ್ಡು ನಗರ) ಕಿರಣ್ ಬಿನ್ ಪ್ರಕಾಶ್, (21 ವರ್ಷ, ನಾಯ್ಡು ನಗರ) ಎಂಬಾತರನ್ನು ಬಂದಿಸಲಾಗಿದೆ.

ವಿಚಾರಣೆ ವೇಳೆ ಅದೇ ದಿನದಂದು ರಾತ್ರಿ ಕಲಾಮಂದಿರ ಮುಂಭಾಗದ ರಸ್ತೆಯಲ್ಲಿ ಸ್ಕೂಟರ್‍ನ ಹಿಂಭಾಗ ಕುಳಿತು ಬರುತ್ತಿದ್ದ ಮಹಿಳೆಯ ಚಿನ್ನಾಭರಣ ಮತ್ತು ಮೊಬೈಲ್ ಇದ್ದ ವ್ಯಾನಿಟಿ ಬ್ಯಾಗನ್ನು ಡಿ. 29-2017 ರಂದು ರಾತ್ರಿ ವಿಜಯನಗರ ವಾಟರ್ ಟ್ಯಾಂಕ್ ರಸ್ತೆಯಲ್ಲಿ ಸ್ಕೂಟರ್‍ನ ಹಿಂಭಾಗ ಕುಳಿತು ಬರುತ್ತಿದ್ದ ಮಹಿಳೆಯ ಮೊಬೈಲ್ ಮತ್ತು ನಗದು ಇದ್ದ ಪರ್ಸನ್ನು ಕಿತ್ತುಕೊಂಡು ಹೋಗಿದ್ದರು ಎಂದು ಹೇಳಿದ್ದಾರೆ. ಆರೋಪಿಗಳಿಂದ ಜಯಲಕ್ಷ್ಮೀಪುರಂ ಮತ್ತು ವಿಜಯನಗರ ಪೊಲೀಸ್ ಠಾಣೆಗಳ ತಲಾ ಒಂದೊಂದು ಪ್ರಕರಣಗಳಿಗೆ ಸಂಬಂಧಪಟ್ಟಂತೆ, ರೂ. 1,70,000/- ಮೌಲ್ಯದ 12 ಗ್ರಾಂ ಚಿನ್ನಾಭರಣ , 2 ಸ್ಯಾಮ್‍ಸಂಗ್ ಜೆ7 ಪ್ರೈಮ್ ಮೊಬೈಲ್ ಫೋನ್‍ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಬಜಾಜ್ ಪಲ್ಸರ್ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಲ್ಲದೆ ಈ ಆರೋಪಿಗಳು ಬೈಕ್ ವೀಲಿಂಗನ್ನು ಕರಗತಗೊಳಿಸಿಕೊಂಡಿದ್ದು, ಈ ಹಿಂದೆ ಸಹ ಇದೇ ರೀತಿಯ ಅಪರಾಧಗಳನ್ನು ಮಾಡಿರುವ ಬಗ್ಗೆ ನರಸಿಂಹರಾಜ ಮತ್ತು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಈ ಕಾರ್ಯವನ್ನು ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ.ರವರಾದ ವಿಕ್ರಂ ವಿ ಅಮಟೆರವರ ಮಾರ್ಗದರ್ಶನದಲ್ಲಿ ನರಸಿಂಹರಾಜ ವಿಭಾಗದ ಡಿ.ಸಿ.ಪಿ.ರವರಾದ ಶ್ರೀ. ಉಮೇಶ್ ಜಿ ಸೇಠ್ ರವರ ನೇತೃತ್ವದಲಿ ವಿಜಯನಗರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಪಿ.ಎನ್. ಅನಿಲ್‍ಕುಮಾರ್, ಪಿ.ಎಸ್.ಐ. ರಾಮಚಂದ್ರ ಎನ್. ಎಎಸ್‍ಐ ಕೃಷ್ಣರವರ ಸಿಬ್ಬಂದಿಯವರಾದ ಶಂಕರ್, ಈಶ್ವರ್, ಸುರೇಶ್, ಸಾಗರ್, ಸಿ. ಮಹೇಶ್, ಶ್ರೀಮತಿ ರೂಪ ಕೈಗೊಂಡಿದ್ದರು. ಈ ಪತ್ತೆ ಕಾರ್ಯಕ್ಕಾಗಿ ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾಃ ಎ. ಸುಬ್ರಮಣ್ಯೇಶ್ವರರಾವ್ ಅವರು ಮೆಚ್ಚಿಕೊಂಡಿದ್ದಾರೆ

Related Articles

Leave a comment

Back to Top

© 2015 - 2017. All Rights Reserved.