ಜೆಡಿಎಸ್ ಪರ ಪ್ರಚಾರಕ್ಕೆ ತೆಲುಗು ನಟ ಪವನ್ ಕಲ್ಯಾಣ್: ಹೆಚ್.ಡಿ ಕುಮಾರಸ್ವಾಮಿ

BREAKING NEWS, Kannada News, Regional No Comments on ಜೆಡಿಎಸ್ ಪರ ಪ್ರಚಾರಕ್ಕೆ ತೆಲುಗು ನಟ ಪವನ್ ಕಲ್ಯಾಣ್: ಹೆಚ್.ಡಿ ಕುಮಾರಸ್ವಾಮಿ 246

ದೇವನಹಳ್ಳಿ: ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪರ ಪ್ರಚಾರ ಮಾಡಲು ತೆಲುಗು ನಟ ಪವನ್ ಕಲ್ಯಾಣ, ಸೇರಿದಂತೆ ಹಲವರು ಪ್ರಚಾರಕ್ಕೆ ಬರುವ ಬಗ್ಗೆ ಮಾತುಕತೆ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ದೇವನಹಳ್ಳಿಯಲ್ಲಿ ಜೆಡಿಎಸ್ ಯುವ ಘಟಕದ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಕೇವಲ ಇಬ್ಬರು ಮಾತ್ರ ಸ್ಪರ್ಧಿಸುವುದು ಖಚಿತ. ಮಾಧ್ಯಮಗಳ ಸುಳ್ಳು ವರದಿಗೆಲ್ಲಾ ಉತ್ತರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಧ್ಯಗಳು ನಮ್ಮ ಕುಟುಂಬದಿಂದ ನಾಲ್ಕು ಜನ ಸ್ಪರ್ಧಿಸಲಿದ್ದಾರೆ ಎಂಬ ಊಹಾ ಪೋಹಾ ಸುದ್ದಿಗಳನ್ನು ಪ್ರಕಟಿಸುತ್ತಿದೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.