ಮಹಾರಾಷ್ಟ್ರದಲ್ಲಿ ಮೈಸೂರಿನ ಅಶ್ವಾರೋಹಿ ಪಡೆಯ ಪೊಲೀಸರ ಜೀಪು ಪಲ್ಟಿ

Kannada News, National, Regional No Comments on ಮಹಾರಾಷ್ಟ್ರದಲ್ಲಿ ಮೈಸೂರಿನ ಅಶ್ವಾರೋಹಿ ಪಡೆಯ ಪೊಲೀಸರ ಜೀಪು ಪಲ್ಟಿ 13

ಮೈಸೂರು: ಮಹಾರಾಷ್ಟ್ರದ ಬಾಂದ್ರಾ ಕಣಿವೆ ಬಳಿ ಮೈಸೂರಿನ ಅಶ್ವಾರೋಹಿ ಪಡೆಯ ಪೊಲೀಸರ ಜೀಪೊಂದು ಪಲ್ಟಿಯಾದ ಘಟನೆ ನಡೆದಿದೆ.

ಘಟನೆಯಲ್ಲಿ ಅದೃಷ್ಟವಶಾತ್ ಯಾವುದೆ ಪ್ರಾಣಾಪಯವಾಗಿಲ್ಲ. ರಾಷ್ಟ್ರೀಯ ಅಶ್ವಾರೋಹಿ ಕ್ರೀಡಾ ಕೂಟದಲ್ಲಿ ಮೈಸೂರಿನ ಅಶ್ವಾರೋಹಿ ಅಧಿಕಾರಿಗಳು ಭಾಗಿಯಾಗಿದ್ದರು. ಬಿಹಾರದಲ್ಲಿ ಆಯೋಜಿಸಿದ್ದ ಕ್ರೀಡಾಕೂಟ ಮುಗಿಸಿ ಮೈಸೂರಿಗೆ ಬರುವ ವೇಳೆ ತಿರುವಿನಲ್ಲಿ ನಿಯಂತ್ರಣಕ್ಕೆ ಸಿಗದೆ ಜೀಪು ಪಲ್ಟಿಯಾಗಿದೆ.

ಜೀಪಿನಲ್ಲಿದ್ದ ಮೌಟೆಂಡ್ ಎಸಿಪಿ ಸೇರಿದಂತೆ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು ಅರ್ಧ ಗಂಟೆ ಕಾಲ ಜೀಪಿನಿಂದ ಹೊರಬರಲಾಗದೆ ನರಳಾಡಿದ್ದು, ಕಾರಿನ ಗಾಜು ಒಡೆದು ಮೌಟೆಂಡ್ ಪೊಲೀಸರು ಹೊರಬಂದಿದ್ದಾರೆ. ಘಟನೆಯಲ್ಲಿ ನಾಲ್ವರಿಗೂ ಸಣ್ಣಪುಟ್ಟ ಪ್ರಮಾಣದ ಗಾಯಗಳಾಗಿವೆ.

Related Articles

Leave a comment

Back to Top

© 2015 - 2017. All Rights Reserved.