ಸಿಎಂ ಸಿದ್ದರಾಮಯ್ಯ ವಿರುದ್ಧ ಜಾಗೃತಿ ಮೂಡಿಸಲು ಮುಂದಾದವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ

BREAKING NEWS, Crime, Kannada News, Regional No Comments on ಸಿಎಂ ಸಿದ್ದರಾಮಯ್ಯ ವಿರುದ್ಧ ಜಾಗೃತಿ ಮೂಡಿಸಲು ಮುಂದಾದವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ 23

ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ನೀಡಿದ್ದ ಭರವಸೆ ಈಡೇರಿಸಿಲ್ಲ ಎಂದು ಜಾಗೃತಿ ಮೂಡಿಸಲು ಮುಂದಾದವರಿಗೆ ಕಾಂಗ್ರೆಸ್ ಕಾರ್ಯಕರ್ತರು ರಕ್ತ ಬರುವಹಾಗೆ ಥಳಿಸಿರುವ ಘಟನೆ ನಡೆದಿದೆ.

‘ಉದ್ಯೋಗಕ್ಕೆ ಓಟು ಆಂದೋಲನ’ (ನೋ ಜಾಬ್ ನೋ ವೋಟ್) ಅಭಿಯಾನದ ರಾಷ್ಟೀಯ ಸಂಚಾಲಕ ಚಂದ್ರ ಮಿಶ್ರ ಎಂಬುವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಹಲ್ಲೆ ನಡೆಸಿದ್ದಾರೆ.

ನಗರದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದ ಬಳಿ ಈ ದಾಳಿ ನಡೆದಿದ್ದು, ಪಾಲಿಕೆ ಸದಸ್ಯ ಪ್ರಶಾಂತ್ ಗೌಡ ಹಾಗೂ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಬೆಳಿಗ್ಗೆ 10ರ ಸುಮಾರಿಗೆ ಅಭಿಯಾನದ ಸದಸ್ಯರೊಂದಿಗೆ ಪ್ರಚಾರ ಕೈಗೊಂಡಾಗ ಸ್ಥಳಕ್ಕೆ ಧಾವಿಸಿದ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ನಡೆಸಿದ್ದಾರೆ. ಚಂದ್ರ ಮಿಶ್ರ ಅವರ ಮೂಗು ಹಾಗೂ ಬಾಯಿಯಿಂದ ರಕ್ತ ವಸರುವಂತೆ ಹಲ್ಲೆ ನಡೆಸಿದ್ದಾರೆ. ಈ ನಂತರ ಚಂದ್ರ ಮಿಶ್ರ ಅವರು ರಕ್ತದ ಮಡುವಿನಲ್ಲೇ ಠಾಣೆಗೆ ದೂರು ನೀಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.