ಮೈಸೂರಿನಲ್ಲಿ ಇಂದಿನಿಂದ ಇಂದಿರಾ ಕ್ಯಾಂಟೀನ್ ಆರಂಭ: ರಿಯಾಯಿತಿ ದರದಲ್ಲಿ ಸಿಗಲಿದೆ ಹಸಿದವರಿಗೆ ಅನ್ನ

Featured, Kannada News, Regional, Top News No Comments on ಮೈಸೂರಿನಲ್ಲಿ ಇಂದಿನಿಂದ ಇಂದಿರಾ ಕ್ಯಾಂಟೀನ್ ಆರಂಭ: ರಿಯಾಯಿತಿ ದರದಲ್ಲಿ ಸಿಗಲಿದೆ ಹಸಿದವರಿಗೆ ಅನ್ನ 59

ಮೈಸೂರು: ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ನಿರ್ಮಾಣವಾಗಿರುವ ಎಲ್ಲಾ ಇಂದಿರಾ ಕ್ಯಾಂಟೀನ್‍ಗಳು ಇಂದಿನಿಂದ ತನ್ನ ಕಾರ್ಯವಾರಂಭಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಗೆ ಕಾಡಾ ಕಚೇರಿಯ ಬಳಿ ನಿರ್ಮಾಣಗೊಂಡಿರುವ ಕ್ಯಾಂಟೀನ್ ಅನ್ನು ಉದ್ಘಾಟಿಸುವ ಮೂಲಕ ಸಿಎಂ ಅವರು ಇಂದಿರಾ ಕ್ಯಾಂಟಿನ್‍ಗೆ ಚಾಲನೆ ನೀಡಲಿದ್ದಾರೆ. ಜೊತೆಗೆ ರಿಯಾಯತಿ ದರದಲ್ಲಿ ಹಸಿದವರಿಗೆ ಮೂರು ಹೊತ್ತಿನ ಆಹಾರ ನೀಡಲು ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ.

ಮೈಸೂರು ಜಿಲ್ಲೆಯಾದ್ಯಂತ ಒಟ್ಟು 17 ಕ್ಯಾಂಟೀನ್ ಗಳಿದ್ದು ಮೈಸೂರು ನಗರದಲ್ಲಿ 11, ಉಳಿದ 6 ಕ್ಯಾಂಟೀನ್ ಗಳು ಜಿಲ್ಲೆಯ ತಾಲ್ಲೂಕು ಕೇಂದ್ರದಲ್ಲಿ ನಿರ್ಮಾಣಗೊಳ್ಳಲಿವೆ. ಪ್ರತಿದಿನ ಮೂರು ವೇಳೆಗಳಲ್ಲಿ ಆಹಾರ ದೊರೆಯುಂತೆ ಕ್ರಮಕೈಗೊಳ್ಳಲಾಗಿದೆ. ಬೆಳಗ್ಗಿನ ತಿಂಟಿ 5 ರೂಗಳಿಗೆ, ಮಧ್ಯಾಹ್ನ, ಮತ್ತು ರಾತ್ರಿಯ ವೇಳೆ ಊಟಕ್ಕೆ 10 ರೂಪಾಯಿ ನಿಗದಿ ಮಾಡಲಾಗಿದೆ. ವ್ಯಕ್ತಿಯೊಬ್ಬರಿಗೆ ದಿನವೊಂದಕ್ಕೆ ಮೂರು ಹೊತ್ತಿಗೆ 60 ರೂ.ನಂತೆ ಟೆಂಡರ್‍ದಾರರಿಗೆ ನೀಡಲಾಗುತ್ತಿದೆ. ಸರಕಾರ ದಿನವೊಂದಕ್ಕೆ ವ್ಯಕ್ತಿಯೊಬ್ಬರಿಗೆ 35 ರೂ. ಸಬ್ಸಿಡಿ ನೀಡಲಿದೆ. ಪ್ರತಿಯೊಂದು ಕ್ಯಾಂಟೀನ್ ಗೂಗಲ್ ಮ್ಯಾಪ್ ನಲ್ಲಿ ಸ್ಥಳ ತೋರಿಸುವಂತೆ ಅಭಿವೃದ್ಧಿ ಪಡಿಸಲಾಗಿದೆ.

ಮೊದಲ ಹಂತದ ಇಂದಿರಾ ಕ್ಯಾಂಟೀನ್ಗಳ ಉದ್ಘಾಟನೆ ಬಳಿಕ ಎರಡನೇ ಹಂತದಲ್ಲಿ ಮೈಸೂರು ತಾಲೂಕು ಹೊರತುಪಡಿಸಿ, ಜಿಲ್ಲೆಯ ಉಳಿದ 6 ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ಗಳು ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಕ್ಯಾಂಟೀನ್ಗಳಲ್ಲಿ ಒಂದು ಹೊತ್ತಿಗೆ 500 ಜನರಿಗೆ ಬೇಕಾಗುವಷ್ಟು, ಅಂದರೆ ಒಂದು ದಿನಕ್ಕೆ 1,500ರಷ್ಟು ಜನರಿಗೆ ಆಹಾರವನ್ನು ಪ್ರತಿದಿನ ವಿತರಿಸಲು ನಿರ್ಧರಿಸಲಾಗಿದೆ.

ಜಿಲ್ಲೆಯ 6 ತಾಲೂಕು ಕೇಂದ್ರಗಳಾದ ತಿ.ನರಸೀಪುರ, ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ, ನಂಜನಗೂಡು, ಕೆ.ಆರ್.ನಗರದ ತಾಲೂಕು ಕೇಂದ್ರಗಳಲ್ಲಿ ತಲಾ ಒಂದರಂತೆ ಒಟ್ಟು 6 ಇಂದಿರಾ ಕ್ಯಾಂಟೀನ್ಗಳನ್ನು ಆರಂಭಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ವಹಿಸಿದೆ.

ಕ್ಯಾಂಟೀನ್ ಎಲ್ಲೆಲ್ಲಿ..?

ಕಾಡಾ ಕಚೇರಿ ಆವರಣ, ಕೆ.ಆರ್.ಆಸ್ಪತ್ರೆ ಆವರಣ, ಸಿಲ್ಕ್ ಫ್ಯಾಕ್ಟರಿ ವೃತ್ತ, ಸೂಯೇಜ್ ಫಾರಂ ವೃತ್ತ, ಚಾಮರಾಜಪುರಂ ರೈಲ್ವೆ ನಿಲ್ದಾಣ, ಸರಕಾರಿ ಅತಿಥಿ ಗೃಹ ಆವರಣ, ಶಾರದಾದೇವಿ ನಗರ, ಅಜೀಜ್ ಸೇಠ್ ನಗರ, ತಿ.ನರಸೀಪುರ ವೃತ್ತ, ತ್ರಿವೇಣಿ ವೃತ್ತ, ಸ್ಲಂ ಬೋಡ್ರ್ನ ಜೋಡಿ ತೆಂಗಿನಮರ ರಸ್ತೆಯಲ್ಲಿ ಕ್ಯಾಂಟೀನ್ ತಲೆ ಎತ್ತಲು ಸಜ್ಜಾಗಿದೆ.

ಮೈಸೂರು ವ್ಯಾಪ್ತಿಯ 11 ಇಂದಿರಾ ಕ್ಯಾಂಟೀನ್ಗಳಿಗೆ ಕುಂಬಾರಕೊಪ್ಪಲು, ಆಲನಹಳ್ಳಿಯಲ್ಲಿ ನಿರ್ಮಿಸಲಾಗುವ ಕಿಚನ್ನಿಂದ ಆಹಾರ ಪೂರೈಕೆ ಮಾಡಲಾಗುವುದು. ಎರಡು ಕಿಚನ್ಗಳ ಪೈಕಿ ಒಂದು ಈಗಾಗಲೇ ಪೂರ್ಣಗೊಂಡಿದ್ದು, ಇನ್ನೊಂದರ ಕೆಲಸ ಪ್ರಗತಿಯಲ್ಲಿದೆ. ಇಂದಿರಾ ಕ್ಯಾಂಟೀನ್ ಮೂಲಕ ಬೆಳಗ್ಗಿನ ತಿಂಡಿ, ಮಧ್ಯಾಹ್ನ,ರಾತ್ರಿಯ ಊಟವನ್ನು ವ್ಯಕ್ತಿಯೊಬ್ಬರಿಗೆ 25 ರೂ.ಗೆ ನೀಡಲಾಗುವುದು. ಇದಕ್ಕೆ ಸರಕಾರ 35 ರೂ. ಸಬ್ಸಡಿ ನೀಡಲಿದೆ.

Related Articles

Leave a comment

Back to Top

© 2015 - 2017. All Rights Reserved.