ಸಿಎಂ ಸ್ವಕ್ಷೇತ್ರದಲ್ಲಿ ತೆನೆ ಹೊರಲು ಮುಂದಾದ ನೂರಾರು ‘ಕೈ’ ಕಾರ್ಯಕರ್ತರು

Kannada News, Regional No Comments on ಸಿಎಂ ಸ್ವಕ್ಷೇತ್ರದಲ್ಲಿ ತೆನೆ ಹೊರಲು ಮುಂದಾದ ನೂರಾರು ‘ಕೈ’ ಕಾರ್ಯಕರ್ತರು 24

ಮೈಸೂರು: ಚುನಾವಣೆ ರಂಗು ಸಮೀಪವಾಗುತ್ತಿದ್ದಂತೆ ಮುಖ್ಯಮಂತ್ರಿ ಪ್ರತಿನಿಧಿಸುವ ವರುಣಾ ಕ್ಷೇತ್ರದಲ್ಲಿಯೇ ಅಸಮಾಧಾನಗೊಂಡಿರುವ ನೂರಕ್ಕೂ ಹೆಚ್ಚು ಕಾರ್ಯಕರ್ತರು ‘ಕೈ’ ಬಿಟ್ಟು ತೆನೆ ಹೊರಲು‌ ಮುಂದಾಗಿದ್ದಾರೆ.

ವರುಣಾ ಕ್ಷೇತ್ರದ ಹಲವೆಡೆ ಸಿದ್ದರಾಮಯ್ಯ ಬೆಂಬಲಿಗರು ಕಾಂಗ್ರೆಸ್‌ಗೆ ಗುಡ್ ಬೈ ಹೇಳಿ ತೆನೆ ಹೊರಲು ಮುಂದಾಗಿದ್ದು, ವರುಣಾ ಕ್ಷೇತ್ರಕ್ಕೆ ಸೇರುವ ಟಿ.ನರಸೀಪುರ ಪಟ್ಟಣದ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್‌ನಿಂದ ತಾ.ಪಂ. ಚುನಾವಣೆಗೆ ಸ್ಪರ್ಧಿಸಿದ್ದ ನಾಗರಾಜು, ಮಾಜಿ ಗ್ರಾ.ಪಂ. ಸದಸ್ಯ ಚಿಕ್ಕಸ್ವಾಮಿ, ಶಿವಣ್ಣ, ಕೆಂಪರಾಜು ಸೇರಿದಂತೆ ನೂರಾರು ಕಾರ್ಯಕರ್ತರು ಜೆಡಿಎಸ್ ಪಾಳಯಕ್ಕೆ ಸೇರ್ಪಡೆಗೊಂಡಿದ್ದಾರೆ. ವರುಣಾ ಜೆಡಿಎಸ್ ಕ್ಷೇತ್ರಾಧ್ಯಕ್ಷ ತಾಯೂರು ಪ್ರಕಾಶ್ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಮುಖರು ಜೆಡಿಎಸ್ ಸೇರಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.