ಸಾಂಸ್ಕೃತಿಕ ನಗರಿ ಈಗ ಕ್ಯಾಟೀನ್ ನಗರಿ: ಇಂದಿರಾ ಕ್ಯಾಂಟಿನ್’ಗೆ ಸಿಎಂ ಚಾಲನೆ

BREAKING NEWS, Kannada News, Regional, Top News No Comments on ಸಾಂಸ್ಕೃತಿಕ ನಗರಿ ಈಗ ಕ್ಯಾಟೀನ್ ನಗರಿ: ಇಂದಿರಾ ಕ್ಯಾಂಟಿನ್’ಗೆ ಸಿಎಂ ಚಾಲನೆ 24

ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಇಂದಿರಾ ಕ್ಯಾಂಟೀನ್’ಗೆ ಚಾಲನೆ ನೀಡಿದ್ದಾರೆ.

ಮೈಸೂರಿನ ಕಾಡಾ ಕಚೇರಿಯ ಆವರಣದಲ್ಲಿ ಇಂದಿರಾ ಕ್ಯಾಂಟೀನ್‍ಗೆ ಚಾಲನೆ ನೀಡಿದ್ದಾರೆ. ಈ ಮೂಲಕ ನಗರದಲ್ಲಿನ 11 ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಗೊಂಡಿವೆ.

ಉದ್ಘಾಟನೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ, ಮೇಯರ್ ಎಂ.ಜೆ ರವಿಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಮೈಸೂರು ನಗರ ವ್ಯಾಪ್ತಿಯಲ್ಲಿ ಒಟ್ಟು 11 ಇಂದಿರಾ ಕ್ಯಾಂಟೀನ್‍ಗಳು ಇಂದಿನಿಂದ ಕಾರ್ಯಾರಂಭ ಆಗಲಿವೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 17 ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಸಿದ್ಧತೆ ನಡೆಯುತ್ತಿದ್ದು, ಮೊದಲ ಹಂತದಲ್ಲಿ ನಗರಪ್ರದೇಶ ನಂತರ ತಾಲೂಕು ಕೇಂದ್ರದಲ್ಲಿ ಪ್ರಾರಂಭವಾಗಲಿದೆ.

Related Articles

Leave a comment

Back to Top

© 2015 - 2017. All Rights Reserved.