ಸುಪ್ರೀಂಕೋರ್ಟ್ ನ್ಯಾಯಾಧೀಶರ ದಿಢೀರ್ ಸುದ್ದಿಗೋಷ್ಠಿ: ನ್ಯಾಯಾಂಗ ವ್ಯವಸ್ಥೆ ವಿರುದ್ಧ ಬಹಿರಂಗ ಆಕ್ರೋಶ

BREAKING NEWS, Kannada News, Regional, Top News No Comments on ಸುಪ್ರೀಂಕೋರ್ಟ್ ನ್ಯಾಯಾಧೀಶರ ದಿಢೀರ್ ಸುದ್ದಿಗೋಷ್ಠಿ: ನ್ಯಾಯಾಂಗ ವ್ಯವಸ್ಥೆ ವಿರುದ್ಧ ಬಹಿರಂಗ ಆಕ್ರೋಶ 100

ನವದೆಹಲಿ: ಭಾರತೀಯ ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಾಲಿ ನ್ಯಾಯಮೂರ್ತಿಗಳು ದಿಢೀರ್ ಸುದ್ದಿಗೋಷ್ಠಿಯ ಮೂಲಕ ನ್ಯಾಯಾಂಗ ವ್ಯವಸ್ಥೆಯ ಸುಧಾರಣೆಗೆ ಕರೆಕೊಟ್ಟಿದ್ದಾರೆ.

ಭಾರತದ ಇತಿಹಾಸದಲ್ಲೇ ಸುಪ್ರೀಂಕೋರ್ಟ್​​ನ ಹಾಲಿ ನ್ಯಾಯಾಧೀಶರು ಪತ್ರಿಕಾಗೋಷ್ಠಿ ನಡೆಸಿದ್ದು ಇದೇ ಮೊದಲು. ಸುಪ್ರೀಂಕೋರ್ಟ್​ನ ಐದು ಅತ್ಯಂತ ಹಿರಿಯ ನ್ಯಾಯಮೂರ್ತಿಗಳ ಪೈಕಿ ನಾಲ್ವರು ಈ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದು ವಿಶೇಷ. ನ್ಯಾ| ಚಲಮೇಶ್ವರ್ ಅವರ ನಿವಾಸದಲ್ಲಿ ನಡೆದ ಈ ಪತ್ರಿಕಾಗೋಷ್ಠಿಯಲ್ಲಿ ನ್ಯಾ| ರಂಜನ್ ಗೋಗೊಯ್, ನ್ಯಾ| ಮದನ್ ಲೋಕೂರ್ ಮತ್ತು ನ್ಯಾ| ಕುರಿಯನ್ ಜೋಸೆಫ್ ಕೂಡ ಉಪಸ್ಥಿತರಿದ್ದರು.

ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು..?

ಇನ್ನು ಸುದ್ದಿಗೋಷ್ಠಿಯಲ್ಲಿ ನ್ಯಾ. ಚಲಮೇಶ್ವರ್ ಅವರು ಸುಪ್ರೀಮ್ ಕೋರ್ಟ್​ನ ಹಾಲಿ ನ್ಯಾಯಾಧೀಶರು ಸುದ್ದಿಗೋಷ್ಠಿ ನಡೆಸುತ್ತಿರುವುದು ಇದು ಭಾರತವಷ್ಟೇ ಅಲ್ಲ, ಜಗತ್ತಿನಲ್ಲೇ ಅತ್ಯಂತ ವಿರಳ ಘಟನೆಯಾಗಿದೆ. ಸುಪ್ರೀಂಕೋರ್ಟ್​ನಲ್ಲಿನ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಾಗಿಲ್ಲವೆಂಬುದನ್ನು ನಿಮಗೆ ತಿಳಿಯಬಯಸುತ್ತೇನೆ. ಬೇರೆ ದಾರಿಯಿಲ್ಲದೇ ನಾವು ಸಾರ್ವಜನಿಕವಾಗಿ ಬರಬೇಕಾಗಿದೆ ಎಂದಿದ್ದಾರೆ.

ಅಲ್ಲದೆ ಮುಖ್ಯನ್ಯಾಯಮೂರ್ತಿಗಳಿಗೆ ನಾವು ನಾಲ್ವರು ಪತ್ರವನ್ನು ಕೊಟ್ಟಿದ್ದೆವು. ಅದರೆ, ಏನೂ ಉಪಯೋಗವಾಗಲಿಲ್ಲ. ಮುಖ್ಯನ್ಯಾಯಮೂರ್ತಿಗಳ ಮನವೊಲಿಸಲು ವಿಫಲರಾಗಿದ್ದೇವೆ. ಪ್ರಜಾತಂತ್ರ ಉಳಿಯಬೇಕಾದರೆ ನಿಷ್ಪಕ್ಷಪಾತಿ ನ್ಯಾಯಾಧೀಶ ಮತ್ತು ನ್ಯಾಯವ್ಯವಸ್ಥೆಯ ಅಗತ್ಯವಿದೆ ಎಂದು ನಾವು ನಾಲ್ವರಿಗೆ ಅನಿಸಿದೆ ಎಂದು ತಿಳಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.