ಆಲ್ರೌಂಡ್ ಆಟವಾಡಿ ಮೆಚ್ಚುಗೆಗೆ ಪಾತ್ರರಾದ ಅರ್ಜುನ್ ತೆಂಡೂಲ್ಕರ್

Kannada News, Sports No Comments on ಆಲ್ರೌಂಡ್ ಆಟವಾಡಿ ಮೆಚ್ಚುಗೆಗೆ ಪಾತ್ರರಾದ ಅರ್ಜುನ್ ತೆಂಡೂಲ್ಕರ್ 16

ಸಿಡ್ನಿ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಸಿಡ್ನಿಯಲ್ಲಿ ನಡೆಯುತ್ತಿರುವ ಸ್ಪಿರಿಟ್ ಆಫ್ ಕ್ರಿಕೆಟ್ ಗ್ಲೋಬಲ್ ಚಾಲೆಂಜ್ ಟಿ-20 ಟೂರ್ನಿಯಲ್ಲಿ ಆಲ್ರೌಂಡ್ ಆಟದ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದಾರೆ.

ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಪರ ಆಡುತ್ತಿರುವ ಅರ್ಜುನ್ ತೆಂಡೂಲ್ಕರ್, 27 ಎಸೆತಗಳಲ್ಲಿ 48 ರನ್ ಸಿಡಿಸುವ ಜೊತೆಗೆ ಬೌಲಿಂಗ್​ನಲ್ಲಿ 4 ವಿಕೆಟ್ ಉರುಳಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.

ಎಡಗೈ ಬ್ಯಾಟ್ಸ್​ಮನ್ ಮತ್ತು ಎಡಗೈ ವೇಗದ ಬೌಲರ್ ಆಗಿರುವ ಅರ್ಜುನ್ ತೆಂಡೂಲ್ಕರ್, ಚಿಕ್ಕಂದಿನಿಂದಲೂ ನನಗೆ ಫಾಸ್ಟ್ ಬೌಲಿಂಗ್ ಮಾಡುವುದೆಂದರೆ ಇಷ್ಟ. ಭಾರತದಲ್ಲಿ ವೇಗದ ಬೌಲರ್​ಗಳ ಸಂಖ್ಯೆ ಕಡಿಮೆ. ಹೀಗಾಗಿ, ಒಳ್ಳೆಯ ವೇಗದ ಬೌಲರ್ ಆಗಲು ಇಚ್ಛಿಸಿದೆ ಎನ್ನುತ್ತಾರೆ. ಬೌಲಿಂಗ್ ಆಲ್ರೌಂಡರ್​ಗಳಾದ ಮಿಶೆಲ್ ಸ್ಟಾರ್ಕ್, ಬೆನ್ ಸ್ಟೋಕ್ಸ್ ಸ್ಫೂರ್ತಿ ಎನ್ನುವ ಅರ್ಜುನ್, ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಒತ್ತಡಕ್ಕೆ ಒಳಗಾಗದೇ ನನ್ನ ಆಟ ಆಡುತ್ತೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.