ಜಗತ್ತಿನ ಪ್ರಬಲ ನಾಯಕರನ್ನು ಹಿಂದಿಕ್ಕಿ ‘ಜನಪ್ರಿಯ ನಾಯಕ’ರಾದ ಪ್ರಧಾನಿ ನರೇಂದ್ರ ಮೋದಿ..!

Kannada News, National No Comments on ಜಗತ್ತಿನ ಪ್ರಬಲ ನಾಯಕರನ್ನು ಹಿಂದಿಕ್ಕಿ ‘ಜನಪ್ರಿಯ ನಾಯಕ’ರಾದ ಪ್ರಧಾನಿ ನರೇಂದ್ರ ಮೋದಿ..! 20

ನವದೆಹಲಿ: ಜನಪ್ರಿಯ ಜಾಗತಿಕ ನಾಯಕರ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಅವರು ಮೂರನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಮೋದಿ ಜಗತ್ತಿನ ಪ್ರಬಲ ನಾಯಕರನ್ನು ಹಿಂದಿಕ್ಕಿ  ಎಲ್ಲರನ್ನೂ ಅಚ್ಚರಿಗೆ ಕೆಡವಿದ್ದಾರೆ.

ಗ್ಯಾಲಪ್ ಇಂಟರ್ ನ್ಯಾಷನಲ್ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಜಿನ್ ಪಿಂಗ್ ರನ್ನು ಹಿಂದಿಕ್ಕಿದ್ದಾರೆ.

2014ರಲ್ಲಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ವಿಶ್ವದ ಹಲವು ದೇಶಗಳಿಗೆ ಭೇಟಿ ನೀಡಿದ ಅವರು ಅಲ್ಲೆಲಾ ದೇಶ ದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ತನ್ನ ಮೋಡಿ ಮಾಡುವ ಮಾತುಗಾರಿಕೆ ,ಬ್ರಷ್ಟಾಚಾರ ರಹಿತ ಆಡಳಿತ, ನೋಟ್ ಬ್ಯಾನ್ ,ಜಿ ಎಸ್ ಟಿ, ಸರ್ಜಿಕಲ್ ಸ್ಟ್ರೈಕ್ ಮುಂತಾದ ಉಪಕ್ರಮಗಳಿಂದ ದೇಶದಲ್ಲಿ ಹಾಗೂ ವಿದೇಶದಲ್ಲಿ ಭಾರಿ ಜನಪ್ರಿಯತೆಯನ್ನು ಹೊಂದಿದ್ದಾರೆ. ಭಾರತದ ಚುನಾವಣಾ ಇತಿಹಾಸದಲ್ಲಿ ಪ್ರಧಾನಿ ಮೋದಿ ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ರಾಜತಾಂತ್ರಿಕತೆಗೆ ಬಂದರೆ ಮಾಜಿ ಪ್ರಧಾನಿ ದಿವಂಗತ ಜವಾಹರ್ ಲಾಲ್ ನೆಹರೂ ಅವರಿಗೆ ಸಮನಾದ ಸ್ಥಾನವನ್ನು ಬಿಜೆಪಿಯಿಂದ ಪಡೆದಿದ್ದಾರೆ.

ಇನ್ನು ಜಗತ್ತಿನ ಜನಪ್ರಿಯ ನಾಯಕರಲ್ಲಿ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಮೊದಲ ಸ್ಥಾನದಲ್ಲಿದ್ದರೆ, ಫ್ರಾನ್ಸ್ ನ ನೂತನ ಪ್ರಧಾನಿ ಎಮ್ಯಾನುವೆಲ್ ಮ್ಯಾಕ್ರನ್ ಎರಡನೇ ಸ್ಥಾನದಲ್ಲಿದ್ದಾರೆ. ಬ್ರಿಟನ್ ಪ್ರಧಾನಿ ಥೆರೆಸಾ ಮೇ ನಾಲ್ಕನೇ ಸ್ಥಾನ, ಜಿನ್ ಪಿಂಗ್ ಐದನೇ ಸ್ಥಾನದಲ್ಲಿದ್ದರೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆರನೇ ಸ್ಥಾನದಲ್ಲಿದ್ದಾರೆ. ಆದರೆ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ 11ನೇ ಸ್ಥಾನ ಪಡೆದಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.