ನಟ ಸಲ್ಮಾನ್ ಖಾನ್‍ಗೆ ಜೀವ ಬೆದರಿಕೆ ಕರೆ

Crime, Entertainment, Kannada News No Comments on ನಟ ಸಲ್ಮಾನ್ ಖಾನ್‍ಗೆ ಜೀವ ಬೆದರಿಕೆ ಕರೆ 12

ಮುಂಬೈ: ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್‍ಗೆ ಜೀವ ಬೆದರಿಕೆ ಬಂದಿದೆಎ. ಈ ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ನಿಲ್ಲಿಸಿ ಪೊಲೀಸರ ರಕ್ಷಣೆ ಜೊತೆಗೆ ಮನೆಗೆ ಹೋಗಿದ್ದಾರೆ.

ಹೌದು. ಸಿನಿಮಾ ಮಂದಿಗೆ ಇತ್ತೀಚಿಗೆ ಜೀವ ಬೆದರಿಕೆ ಕರೆಗಳು ಹೆಚ್ಚು ಬರುತ್ತಿರುವ ಘಟನೆಳು ಹೆಚ್ಚಾಗಿವೆ. ಈ ಸಾಲಿಗೆ ಹೊಸದಾಗಿ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್‍ಗೆ ಬೆದರಿಕೆ ಬಂದಿದ್ದ. ಮುಂಬೈನ ಫಿಲ್ಮ್ ಸಿಟಿಯಲ್ಲಿ ಸಲ್ಮಾನ್ ಖಾನ್ `ರೇಸ್ 3 ಸಿನಿಮಾದ ಚೀತ್ರಿಕರಣದಲ್ಲಿ ಬಿಜಿಯಾಗಿದ್ದರು. ಈ ವೇಳೆಯಲ್ಲಿ ಅವರಿಗೆ ಅನಾಮಿಕ ಕರೆಯೊಂದು ಬಂದಿದ್ದು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಇದರಿಂದ ಆತಂಕಗೊಂಡ ಸಲ್ಮಾನ್ ಖಾನ್ ಕೂಡಲೇ ಸಿನಿಮಾದ ಶೂಟಿಂಗ್‍ನನ್ನು ಸ್ಥಗಿತಗೊಳಿಸಿ, ಪೆÇಲೀಸರ ರಕ್ಷಣೆಯಲ್ಲಿ ಬಾಂದ್ರಾದ ಮನೆಗೆ ಹೋಗಿದ್ದಾರೆ. ರಾಜಾಸ್ಥಾನ ಮೂಲದ ಗ್ಯಾಂಗ್ ಸ್ಟರ್ ಗಳಿಂದ ಸಲ್ಲುಗೆ ಜೀವ ಬೆದರಿಕೆ ಕರೆ ಬಂದಿದೆ ಎಂದು ಸಲ್ಮಾನ್ ಖಾನ್ ಅವರ ತಂದೆ ಗುರುವಾರ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗಷ್ಟೇ ರಾಜಸ್ತಾನದ ನ್ಯಾಯಾಲಯಕ್ಕೆ ಕೃಷ್ಣಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಹಾಜರಾಗಿದ್ದರು. ಈ ವೇಳೆ ನ್ಯಾಯಾಲಯದ ಆವರಣದಲ್ಲೇ ರೌಡಿಯೊಬ್ಬ ಜೀವ ಬೆದರಿಕೆ ಹಾಕಿದ್ದನು.

ಅಲ್ಲದೆ ರೇಸ್-3 ಚಿತ್ರದ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಹುಡುಕಿಕೊಂಡು ಸ್ಥಳಕ್ಕೆ ಕೆಲ ಅಪರಿಚಿತ ವ್ಯಕ್ತಿಗಳು ಬಂದಿದ್ದಾರೆ. ಅವರನ್ನು ಗಮನಿಸಿದ ಚಿತ್ರತಂಡ ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಚಿತ್ರೀಕರಣದ ಸ್ಥಳಕ್ಕೆ ಭೇಟಿ ನೀಡಿ ಶೂಟಿಂಗ್ ಮುಂದಕ್ಕೆ ಹಾಕುವಂತೆ ತಿಳಿಸಿದ್ದು, ಪೊಲೀಸರ ನಿರ್ದೇಶನದ ಮೇರೆಗೆ ನಿರ್ಮಾಪಕ ರಮೇಶ್ ತೌರಾನಿಯವರು ಚಿತ್ರೀಕರಣವನ್ನು ಮುಂದೂಡಿದ್ದಾರೆ. ಪೊಲೀಸರೇ ಸಲ್ಮಾನ್ ಅವರನ್ನು ತಮ್ಮ ರಕ್ಷಣೆಯಲ್ಲೇ ಮುಂಬೈನ ಬಾಂದ್ರಾ ನಿವಾಸಕ್ಕೆ ಕರೆದೊಯ್ದಿದಿದ್ದು, ಸಲ್ಮಾನ್ ಅವರ ನಿವಾಸಕ್ಕೆ ಪೊಲೀಸರು ಭದ್ರತೆಯನ್ನು ಕಲ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

 

Related Articles

Leave a comment

Back to Top

© 2015 - 2017. All Rights Reserved.