ಬಿಜೆಪಿ ಪರಿವರ್ತನಾ ಯಾತ್ರೆಗೆ ಜನರನ್ನು ಸೆಳೆಯಲು ಮಾಡಿಸಿದ್ರು ನಂಗಾನಾಚ್ ನೃತ್ಯ..!

BREAKING NEWS, Kannada News, Regional, Top News No Comments on ಬಿಜೆಪಿ ಪರಿವರ್ತನಾ ಯಾತ್ರೆಗೆ ಜನರನ್ನು ಸೆಳೆಯಲು ಮಾಡಿಸಿದ್ರು ನಂಗಾನಾಚ್ ನೃತ್ಯ..! 31

ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಕೈಗೊಂಡಿದ್ದ ಪರಿವರ್ತನಾ ಯಾತ್ರೆಗೆ ಜನರನ್ನು ಸೆಳೆಯಲು ವೇದಿಕೆಯ ಮೇಲೆ ನೃತ್ಯ ಮಾಡಿಸಲಾಗಿದೆ.

ಜಿಲ್ಲೆಯ ಬಾಗೇಪಲ್ಲಿಯ ಪಟ್ಟಣದ ಎಚ್.ಎನ್.ವೃತ್ತದಲ್ಲಿ ಹಾಕಿದ ವೇದಿಕೆಯಲ್ಲಿ ಬೆಳಿಗ್ಗೆ 10.30ರ ಸುಮಾರಿಗೆ ಆರಂಭಗೊಂಡ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಐದು ಯುವತಿಯರು ಬಗೆಬಗೆಯ ಹಾಡಿಗೆ ಮೈಬಳುಕಿಸಿ ಹೆಜ್ಜೆ ಹಾಕುತ್ತ ನಂಗಾನಾಚ್ ಮಾಡಿದ್ದಾರೆ. ವೇದಿಕೆ ಬಳಿ ನೆರೆದಿರುವ ನೂರಾರು ಜನರು ನೃತ್ಯ ನೋಡಿ ಕೇಕೆ, ಶಿಳ್ಳೆ ಹಾಕಿದ್ದಾರೆ.

ಬಾಗೇಪಲ್ಲಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಹರಿಕೇರಿ ಕೃಷ್ಣಾ ರೆಡ್ಡಿ ಅವರು ಇಂದು ತಾಲ್ಲೂಕಿನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಯಾತ್ರೆಗೆ ಜನರನ್ನು ಸೆಳೆಯುವ ಉದ್ದೇಶದಿಂದ ಯುವತಿಯರಿಂದ ಅಶ್ಲೀಶ ನೃತ್ಯ ಮಾಡಿಸಿದ್ದಾರೆ.

ಗಡಿಭಾಗದಲ್ಲಿ ಬಿಜೆಪಿಗೆ ಒಲವು ಕಡಿಮೆ ಇರುವ ಕಾರಣ ಯಾವುದೇ ವೇದಿಕೆ ಕಾರ್ಯಕ್ರಮ ಆಯೋಜಿಸದೆ ಯಡಿಯೂರಪ್ಪ, ಸದಾನಂದಗೌಡ ಸೇರಿದಂತೆ ಹಲವು ಮುಂಖಂಡರ ರೋಡ್ ಶೋ ಆಯೋಜಿಸಲಾಗಿತ್ತು. ಮಧ್ಯಾಹ್ನ 1 ಗಂಟೆಗೆ ನಿಗದಿಪಡಿಸಿದ್ದ ರೋಡ್ ಶೋ ತಡವಾಗಿ ಬಾಗೇಪಲ್ಲಿಗೆ ಆಗಮಿಸಿದ ಕಾರಣ ಅಲ್ಲಿಯವರೆಗೆ ಜನರನ್ನು ತಡೆದು ನಿಲ್ಲಿಸಲು ಬಿಜೆಪಿ ಟಿಕೆಟ್ ಆಕಾಂಕ್ಷಿ ಹರಿಕೇರಿ ಕೃಷ್ಣಾರೆಡ್ಡಿ ಅವರು ನಂಗಾನಾಚ್ ಮೊರೆ ಹೋಗಿದ್ದಾರೆ.

ಇನ್ನು ಇದೇ ವೇಳೆ ಕೆಲ ಯುವಕರು, ಸಾರ್ವಜನಿಕರು ಕೂಡ ಯುವತಿಯರಿಗೆ ಸಾಥ್ ನೀಡಿ ಹೆಜ್ಜೆ ಹಾಕುತ್ತಿರುವ ದೃಶ್ಯಗಳು ಕಂಡುಬಂದವು. ಬಹಿರಂಗ ವೇದಿಕೆಯಲ್ಲಿ ‘ಅಲ್ಲಾಡ್ಸು ಅಲ್ಲಾಡ್ಸು’ ಹಾಡು ಸೇರಿದಂತೆ ಅನೇಕ ಗೀತೆಗಳಿಗೆ ವೇದಿಕೆ ಮೇಲಿದ್ದವರೆಲ್ಲ ತೋರಿದ ಮಾದಕ ಕುಣಿತಕ್ಕೆ ಅನೇಕ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

Related Articles

Leave a comment

Back to Top

© 2015 - 2017. All Rights Reserved.