ಹತ್ತೂರು ಮೀರಿಸುವ ಸುತ್ತೂರು ಜಾತ್ರೆ ಆರಂಭ: ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ನಟ ಶಿವರಾಜಕುಮಾರ್

BREAKING NEWS, Kannada News, Regional, Top News No Comments on ಹತ್ತೂರು ಮೀರಿಸುವ ಸುತ್ತೂರು ಜಾತ್ರೆ ಆರಂಭ: ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ನಟ ಶಿವರಾಜಕುಮಾರ್ 32

ಮೈಸೂರು: ಧಾರ್ಮಿಕ ಕ್ಷೇತ್ರ ಸುತ್ತೂರಿನಲ್ಲಿ ಜಾತ್ರಾ ಮಹೋತ್ಸವ ಇಂದು ವರ್ಣರಂಜಿತವಾಗಿ ಆರಂಭಗೊಂಡಿತು.

ಮೈಸೂರಿನ ನಂಜನಗೂಡು ತಾಲೂಕು ಸುತ್ತೂರು ಶ್ರೀ ಕ್ಷೇತ್ರದ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆಯ ಸಾಂಸ್ಕೃತಿಕ ಮೇಳ, ಮಾಹಿತಿ ಕೇಂದ್ರ, ರಂಗೋಲಿ, ಸೋಬಾನೆ ಪದ ಸ್ಪರ್ಧೆ ಕಾರ್ಯಕ್ರಮಗಳು ಉದ್ಘಾಟನೆಗೊಂಡವು.

ಮೊದಲಿಗೆ ಖ್ಯಾತ ಚಲನಚಿತ್ರ ನಟ ಡಾ. ಶಿವರಾಜಕುಮಾರ್ ಅವರು ಸಾಂಸ್ಕೃತಿಕ ಮೇಳಕ್ಕೆ ಚಾಲನೆ ನೀಡಿದರು. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಮಲ್ಲಿಗೆ ವೀರೇಶ್ ಅವರು ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿದರು. ಶಾಸಕರು ಹಾಗೂ ಮಾಜಿ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಸೋಬಾನೆ ಪದ ಸ್ಪರ್ಧೆ ಉದ್ಘಾಟಿಸಿದರು.

ಈ ವೇಳೆ ವೇದಿಕೆಯ ಮೇಲೆ ಶಿವಮೊಗ್ಗದ ಬಸವ ಕೇಂದ್ರದ ಮರುಳುಸಿದ್ದ ಸ್ವಾಮಿಗಳು, ಸುಕ್ಷೇತ್ರ ಕಂಬದಹಳ್ಳಿಯ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು, ಚಿತ್ರ ನಿರ್ಮಾಪಕರು ಮತ್ತು ವಿತಕರಾದ ಎಸ್.ಎ ಚಿನ್ನೇಗೌಡ ಅವರು, ವಿಧಾನಸಭಾ ಸದಸ್ಯರಾದ ಹೆಚ್.ಪಿ ಮಂಜುನಾಥ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Articles

Leave a comment

Back to Top

© 2015 - 2017. All Rights Reserved.