ದೀಪಕ್​ ಹತ್ಯೆ ಪ್ರಕರಣದ ಆರೋಪಿ ಇಲಿಯಾಸ್ ಬರ್ಬರ ಹತ್ಯೆ

BREAKING NEWS, Crime, Kannada News, Regional No Comments on ದೀಪಕ್​ ಹತ್ಯೆ ಪ್ರಕರಣದ ಆರೋಪಿ ಇಲಿಯಾಸ್ ಬರ್ಬರ ಹತ್ಯೆ 18

ಮಂಗಳೂರು: ಮಂಗಳೂರಿನಲ್ಲಿ ಮತ್ತೆ ರೌಡಿಗಳು ಅಟ್ಟಹಾಸ ಮೆರೆದಿದ್ದು, ಟಾರ್ಗೆಟ್ ಗ್ಯಾಂಗ್​ನ ರುವಾರಿ ಇಲಿಯಾಸ್​ನ ಬರ್ಬರ ಹತ್ಯೆಯಾಗಿದೆ.

ಮಂಗಳೂರಿನ ಜಪ್ಪು ಕುಡ್ಪಾಡಿ ಪ್ರದೇಶದಲ್ಲಿರುವ ಇಲಿಯಾಸ್ ಅವರ ಫ್ಲ್ಯಾಟ್​ಗೆ ಇಂದು ಬೆಳಗ್ಗೆ ನುಗ್ಗಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಎದೆ, ಬೆನ್ನು ಮತ್ತು ಹೊಟ್ಟೆಗೆ ಇರಿದು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಲಿಯಾಸ್​ನನ್ನು ಕೂಡಲೇ ನಗರದ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೀಪಕ್​ ಹತ್ಯೆ ಪ್ರಕರಣದಲ್ಲಿ ಇಲ್ಯಾಸ್​​ ಬಂದನವಾಗಿದ್ದನು. ನಿನ್ನೆಯಷ್ಟೇ ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಈತನ ಎದುರಾಳಿ ಸಫ್ವಾನ್ ಗ್ಯಾಂಗ್ ಈ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.