ಉದ್ಯಮಿ ಕೆ.ಸಿ ವೀರೇಂದ್ರ ( ಪಪ್ಪಿ) ಜೆಡಿಎಸ್ ಪಕ್ಷದಿಂದ ಸ್ಪರ್ಧೆ: ಚಿತ್ರದುರ್ಗದ ರಾಜಕೀಯದಲ್ಲಿ ಸಂಚಲನ

Kannada News, Regional No Comments on ಉದ್ಯಮಿ ಕೆ.ಸಿ ವೀರೇಂದ್ರ ( ಪಪ್ಪಿ) ಜೆಡಿಎಸ್ ಪಕ್ಷದಿಂದ ಸ್ಪರ್ಧೆ: ಚಿತ್ರದುರ್ಗದ ರಾಜಕೀಯದಲ್ಲಿ ಸಂಚಲನ 54

ಚಿತ್ರದುರ್ಗ: ಉದ್ಯಮಿ ಕೆ.ಸಿ. ವೀರೇಂದ್ರ (ಪಪ್ಪಿ) ಅವರು ಚಿತ್ರದುರ್ಗ ನಗರದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. 

ಕೆ.ಸಿ. ವೀರೇಂದ್ರ ಅವರು ಮೂಲತಃ ಹೊಸದುರ್ಗದವರಾದರೂ ಇವರ  ಸ್ನೇಹಪರತೆ ಜನೋಪಯೋಗಿ ಕೆಲಸಗಳಿಂದ ಚಿತ್ರದುರ್ಗ ಜಿಲ್ಲೆಯಾದ್ಯಂತ  ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಹಾಗಾಗಿ ಚಿತ್ರದುರ್ಗ ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಿ ನಿಂತರೂ  ಉತ್ತಮ ಪೈಪೋಟಿ ಕೊಡುವ ಅಭ್ಯರ್ಥಿಯಾಗುವುದಂತೂ  ನಿಸ್ಸಂಶಯ.   

2018 ರ ಚುನಾವಣೆಯಲ್ಲಿ ಕೆ. ಸಿ. ವೀರೇಂದ್ರ ಅವರು ಚಿತ್ರದುರ್ಗದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತಯಾರಿ ನಡೆಸುತ್ತಿದ್ದಾರೆ  ಎನ್ನುವ ಸುದ್ದಿ ಈಗ ಎಲ್ಲೆಡೆ ಪ್ರಚಾರ ವಾಗುತ್ತಿದೆ.   ಅಪಾರ ಜನ ಬೆಂಬಲ ಹೊಂದಿರುವ ಕೆ.ಸಿ. ವೀರೇಂದ್ರ ಅವರು ಅಭ್ಯರ್ಥಿಯಾಗುತ್ತಾರೆ ಎನ್ನುವ ವಿಷಯ ತಿಳಿದು ಚಿತ್ರದುರ್ಗ ನಗರದ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು  ಈಗಾಗಲೇ  ಚುನಾವಣಾ ಕಾರ್ಯತಂತ್ರ ಬದಲಾವಣೆ ಮಾಡಲು ಯೋಚಿಸುತ್ತಿದ್ದಾರೆ.   

ಮೂಲತಃ ಉದ್ಯಮಿಯಾಗಿದ್ದರೂ ಹಲವಾರು ಸಮಾಜಮುಖಿ ಕಾರ್ಯಗಳಿಂದ ಈಗಾಗಲೇ ಉತ್ತಮ ಹೆಸರು ಮಾಡಿರುವ ಕೆ.ಸಿ. ವೀರೇಂದ್ರ ಅವರು ಈ ಬಾರಿ ಚುನಾವಣಾ ಕಣಕ್ಕೆ ಧುಮುಕಿದರೆ ತಮ್ಮ  ನಾಯಕರ ಗೆಲುವು ಕಷ್ಟ ಸಾಧ್ಯ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರೇ ಎಲ್ಲೆಡೆ ಮಾತಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಈ ಬೆಳವಣಿಗೆ ಚಿತ್ರದುರ್ಗದಲ್ಲಿ ರಾಜಕೀಯ ಧೃವೀಕರಣಕ್ಕೆ  ಕಾರಣವಾಗುವ ಲಕ್ಷಣಗಳು ಗೋಚರಿಸುತ್ತಿವೆ. 

ವೀರೇಂದ್ರ ಅವರು ಅಭ್ಯರ್ಥಿಯಾಗಿ  ಚಿತ್ರದುರ್ಗದಲ್ಲಿ ಸಂಘಟನೆಯ ಕೆಲಸ ಪ್ರಾರಂಭ ಮಾಡಿದರೆ  ಹಲವಾರು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಯುವ ಕಾರ್ಯಕರ್ತರ  ದಂಡು ಜೆಡಿಎಸ್ ಪಕ್ಷವನ್ನು  ಸೇರಲು ತುದಿಗಾಲಲ್ಲಿ ನಿಂತಿದೆ. ಇವರು ಜಿಲ್ಲೆಯಾದ್ಯಂತ ಹೊಂದಿರುವ ಅಭಿಮಾನಿ ಬಳಗ ಜೆಡಿಎಸ್ ಪಕ್ಷಕ್ಕೆ ಚಿತ್ರದುರ್ಗ ಜಿಲ್ಲೆಯಲ್ಲಿ ಇನ್ನು ಹೆಚ್ಚಿನ ಬಲ ತುಂಬುವುದಂತೂ ನಿಸ್ಸಂಶಯ. ಮುಖ್ಯವಾಗಿ ಚಳ್ಳಕೆರೆ, ಹಿರಿಯೂರು ಹಾಗೂ ಹೊಸದುರ್ಗ  ಕ್ಷೇತ್ರದಲ್ಲಿ ಇವರ ಪ್ರಭಾವ ಹೆಚ್ಚಿದೆ ಮತ್ತು ಅದು  ಅಲ್ಲಿಯ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗುವ ಸೂಚನೆಗಳಿವೆ. ಈ ಎಲ್ಲಾ  ಕಾರಣಗಳು ಚಿತ್ರದುರ್ಗ ಜಿಲ್ಲೆಯ  ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಿರುವುದಂತೂ  ನಿಜ.

Related Articles

Leave a comment

Back to Top

© 2015 - 2017. All Rights Reserved.