ನಿಮ್ಮ ಸಚಿವರಿಗೆ ಸರಿಯಾದ ಭಾಷೆ ಬಳಸಲು ಹೇಳಿ, ಇಲ್ಲವಾದರೆ ನಾವೇ ಪಾಠ ಕಲಿಸ್ತೀವಿ ಎಂದ ಸಂಸದ ಪ್ರತಾಪ್ ಸಿಂಹ

BREAKING NEWS, Kannada News, Regional, Top News No Comments on ನಿಮ್ಮ ಸಚಿವರಿಗೆ ಸರಿಯಾದ ಭಾಷೆ ಬಳಸಲು ಹೇಳಿ, ಇಲ್ಲವಾದರೆ ನಾವೇ ಪಾಠ ಕಲಿಸ್ತೀವಿ ಎಂದ ಸಂಸದ ಪ್ರತಾಪ್ ಸಿಂಹ 19

ಮೈಸೂರು: ಕನ್ನಡಿಗರ ಕುರಿತು ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಂಕರ್ ಅವಹೇಳನಕಾರಿ ಹೇಳಿಕೆ ಹಿನ್ನಲೆ ಗೋವಾ ಸಚಿವನ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋವಾ ಬಿಜೆಪಿ ಸಚಿವರ ಹೇಳಿಕೆಯನ್ನು ಖಂಡಿಸಿದ ಸಂಸದ ಪ್ರತಾಪ್ ಸಿಂಹ ಟ್ವಿಟರ್ ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಮುಖ್ಯಮಂತ್ರಿ ಪರಿಕರ್‌ಜೀ ಅವರೇ. ನಿಮ್ಮ ಸರ್ಕಾರದ ಉದಾರತೆ ಬಗ್ಗೆ ನಮಗೆ ಗೌರವ ಇದೆ. ಕಾಂಗ್ರೆಸ್‌ನ ಕೊಳಕು ರಾಜಕಾರಣದ ಹೊರತಾಗಿ ನಿಮ್ಮ ನಿಲುವಿಗೆ ಗೌರವ ಇದೆ. ಆದ್ರೆ ಪದಗಳು ಉಚಿತವಾಗಿ ಸಿಗುತ್ತವೆ ಅಂತ ಮಾತನಾಡಬಾರದು. ಆ ಪದಗಳನ್ನು ಬಳಸುವಾಗ ಎಚ್ಚರವಿರಬೇಕು. ನಿಮ್ಮ ಸಚಿವ ವಿನೋದ್ ಪಾಲೀನ್ಕರ್ ಗೆ ಸರಿಯಾದ ಭಾಷೆ ಬಳಸಲು ಹೇಳಿ. ಇಲ್ಲವಾದರೆ ಅವರು ಇನ್ನೊಮ್ಮೆ ಕರ್ನಾಟಕಕ್ಕೆ ಕಾಲಿಟ್ಟರೆ ನಾವೇ ಪಾಠ ಕಲಿಸಬೇಕಾಗುತ್ತೆ. ಎಂದು ಟ್ವಿಟರ್‌ನಲ್ಲಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ಹೊರಹಾಕೊದ್ದಾರೆ.  ಮನೋಹರ್ ಪರಿಕರ್‌ಗೆ ಟ್ಯಾಗ್ ಮಾಡಿ ಟ್ವಿಟ್ ಮಾಡಿದ್ದಾರೆ.

ಉತ್ತರ ಕರ್ನಾಟಕದ ಕಂಕುಂಬಿ ಪ್ರದೇಶಲ್ಲಿ ಮಹದಾಯಿ ನೀರು ತಿರುಗಿಸುವ ಸ್ಥಳಕ್ಕೆ ಶನಿವಾರ ಪೊಲೀಸ್ ಭದ್ರತೆಯೊಂದಿಗೆ ಭೇಟಿ ನೀಡಿದ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಂಕರ್ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿ, ‘ಇವರು ಹರಾಮಿಗಳು, ಏನು ಬೇಕಾದರೂ ಮಾಡಬಹುದು’ ಎಂದಿದ್ದರು. ತಪ್ಪಿನ ಅರಿವಾಗುತ್ತಿದ್ದಂತೆ, ಭಾವಾವೇಶದಲ್ಲಿ ಆ ಪದ ಬಳಸಿರುವುದಾಗಿಯೂ, ಅದನ್ನು ನಿರ್ಲಕ್ಷಿಸಲು ಮನವಿ ಮಾಡಿಕೊಂಡಿದ್ದರು.

ಸಂಸದ ಪ್ರತಾಪ್ ಟ್ವಿಟ್:  https://twitter.com/mepratap/status/952523100989440000

Related Articles

Leave a comment

Back to Top

© 2015 - 2017. All Rights Reserved.