ಒಂದು ವಾರ ಹೊತ್ತು ಉರಿದು ಮುಳುಗಡೆಯಾದ ತೈಲ ಟ್ಯಾಂಕರ್: 32 ಮಂದಿ ಜಲ ಸಮಾಧಿ

International, Kannada News No Comments on ಒಂದು ವಾರ ಹೊತ್ತು ಉರಿದು ಮುಳುಗಡೆಯಾದ ತೈಲ ಟ್ಯಾಂಕರ್: 32 ಮಂದಿ ಜಲ ಸಮಾಧಿ 37

ಬೀಜಿಂಗ್: ಚೀನಾ ಜಲ ಪ್ರದೇಶದಲ್ಲಿ ಸರಕು ಸಾಗಣೆ ಹಡಗಿಗೆ ಅಪ್ಪಳಿಸಿ ಬೆಂಕಿ ತಗುಲಿ ಸುಮಾರು ಒಂದು ವಾರ ಕಾಲ ಹೊತ್ತಿ ಉರಿದ ತೈಲ ಟ್ಯಾಂಕರ್ ಹಡಗು ನಿನ್ನೆ ಮುಳುಗಡೆಯಾಗಿದೆ.

ಹಡಗಿನಲ್ಲಿದ್ 32 ಜನರಲ್ಲಿ ಯಾರೊಬ್ಬರೂ ಬದುಕುಳಿದಿರುವ ಸಾಧ್ಯತೆ ಇಲ್ಲ. ಜಲಸಮಾಧಿಯಾದ ನೌಕೆಯು ದಕ್ಷಿಣ ಕೊರಿಯಾಗೆ 1.36 ಲಕ್ಷ ಲೀಟರ್ ಕಚ್ಚಾ ತೈಲವನ್ನು ಸಾಗಿಸುತ್ತಿತ್ತು. ಜ.6ರಂದು ಹಾಂಕಾಂಗ್ ನೋಂದಣಿಯ ಸರಕು ಸಾಗಣೆ ಹಡಗಿಗೆ ಈ ತೈಲ ಟ್ಯಾಂಕರ್ ಡಿಕ್ಕಿ ಹೊಡೆದಿತ್ತು.

ಅಪಘಾತದ ತೀವ್ರತೆಗೆ ಟ್ಯಾಂಕರ್‍ಗೆ ಬೆಂಕಿ ತಗಲಿ ಸುಮಾರು ಒಂದು ವಾರ ಕಾಲ ಹೊತ್ತಿ ಉರಿಯಿತು. ಬೆಂಕಿ ನಂದಿಸಲು ನಡೆಸಿದ ಯತ್ನಗಳು ವಿಫಲವಾಗಿ ನಿನ್ನೆ ಸಂಜೆ ನೌಕೆ ಮುಳುಗಡೆಯಾಯಿತು. ಅದರಲ್ಲಿದ್ದ 32 ಸಿಬ್ಬಂದಿ ದುರಂತದ ನಾಪತ್ತೆಯಾಗಿದ್ದು, ಯಾರೊಬ್ಬರೂ ಬದುಕಿರುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ಖಚಿತ ಪಡಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.