ಬಿಗ್’ಬಾಸ್ ಶೋ’ನಲ್ಲಿ ಜಯಗಳಿಸಿದ ಕಿರುತೆರೆ ನಟಿ

Entertainment, Kannada News No Comments on ಬಿಗ್’ಬಾಸ್ ಶೋ’ನಲ್ಲಿ ಜಯಗಳಿಸಿದ ಕಿರುತೆರೆ ನಟಿ 16

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಬಿಗ್ ಬಾಸ್ 11ನೇ ಆವೃತ್ತಿಯಲ್ಲಿ ಕಿರುತೆರೆ ನಟಿ ಶಿಲ್ಪಾ ಶಿಂಧೆ ಜಯಗಳಿಸಿದ್ದಾರೆ.

ನಟಿ ಹೀನಾ ಖಾನ್ ಗಿಂತ ಅಧಿಕ ವೋಟ್ ಗಳಿಸಿದ ಶಿಲ್ಪಾ ಬಿಗ್ ಬಾಸ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಕ್ಟೋಬರ್ 1ರಂದು ಆರಂಭವಾಗಿದ್ದ ಈ ರಿಯಾಲಿಟಿ ಶೋ ನಿನ್ನೆ ಮುಕ್ತಾಯವಾಗಿದೆ. ಟಾಪ್ 4 ಸ್ಥಾನದಲ್ಲಿದ್ದ ಪುನೀಶ್ ಶರ್ಮಾ ಹಾಗೂ ವಿಕಾಸ್ ಗುಪ್ತಾ ಕಡಿಮೆ ವೋಟ್ ಬಂದಿದ್ದರಿಂದ ಮೊದಲೇ ಹೊರಬಿದ್ದರು.

ಅಂತಿಮವಾಗಿ ಶಿಲ್ಪಾ ಶಿಂಧೆ ಹಾಗೂ ಹೀನಾ ಖಾನ್ ಮಧ್ಯೆ ಪೈಪೋಟಿ ಇತ್ತು. ಸಲ್ಮಾನ್ ಖಾನ್ ಈ ಶೋವನ್ನು ಹೋಸ್ಟ್ ಮಾಡಿದ್ದಾರೆ. ಗ್ರಾಂಡ್ ಫಿನಾಲೆಗೆ ನಟ ಅಕ್ಷಯ್ ಕುಮಾರ್ ಮುಖ್ಯ ಅತಿಥಿಯಾಗಿ ಬಂದಿದ್ದರು. ಒಟ್ಟು 19 ಮಂದಿ ಬಿಗ್ ಬಾಸ್-11ರಲ್ಲಿ ಸ್ಪರ್ಧಿಸಿದ್ದರು.

Related Articles

Leave a comment

Back to Top

© 2015 - 2017. All Rights Reserved.