ಮೈಸೂರಿಗೆ ಮತ್ತೆ ಸ್ವಚ್ಛ ನಗರಿ ಪಟ್ಟ ಕಲ್ಪಿಸಲು ‘ಸ್ವಚ್ಛ ಸರ್ವೇಕ್ಷಣಾ’ದೊಂದಿಗೆ ವಿಶೇಷ ಪ್ರಯತ್ನ

BREAKING NEWS, Kannada News, Regional, Top News No Comments on ಮೈಸೂರಿಗೆ ಮತ್ತೆ ಸ್ವಚ್ಛ ನಗರಿ ಪಟ್ಟ ಕಲ್ಪಿಸಲು ‘ಸ್ವಚ್ಛ ಸರ್ವೇಕ್ಷಣಾ’ದೊಂದಿಗೆ ವಿಶೇಷ ಪ್ರಯತ್ನ 22

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ ಹದಿನೈದು ದಿನಗಳ ಕಾಲ ಸ್ವಚ್ಛ ಸರ್ವೇಕ್ಷಣಾ 2018 ಜಾಗೃತಿ ಕಾರ್ಯಕ್ರಮ ಚಾಲನೆ ದೊರೆತಿದೆ.

ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಮೈಸೂರು ಘಟಕ ವತಿಯಿಂದ ಈ ಕಾರ್ಯಕ್ರಮ ಆಯೋಜನೆಗೊಂಡಿದೆ. ಇಂದಿನಿಂದ ಜನವರಿ 31ರವರೆಗೆ ಸ್ವಚ್ಚಭಾರತ ಅಭಿಯಾನವನ್ನು ನಗರದ ಆಯ್ದ ಪ್ರದೇಶಗಳಲ್ಲಿ ವಿಶೇಷವಾಗಿ ರೂಪಸಿದ್ದು, ಚಿತ್ರಕಲಾರಚನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಭಾಷಣ ಪ್ರಬಂಧ ರಚನೆ, ಸೈಕಲ್ ಜಾಥ ಮೂಲಕ ಜನರಲ್ಲಿ ಸ್ವಚ್ಛತೆಯ ಸಂದೇಶವನ್ನು ರವಾನಿಸುತ್ತಿದೆ. 15 ದಿನಗಳ ಈ ಪಾಕ್ಷಿಕ ಚಟುವಟಿಕೆಗಳಿಗೆ ಮೈಸೂರು ಜಿಲ್ಲಾಡಳಿತ ಹಾಗೂ ನಗರ ಪಾಲಿಕೆ ಸಹಕಾರ ನೀಡಿದ್ದು, ಜತೆಗೆ ಸಿಟಿಜನ್ಸ್ ಫೋರಂ ಫಾರ್ ಸ್ವಚ್ಛ ಮೈಸೂರು-2018 ಕೂಡ ಕೈ ಚೋಡಿಸಿದೆ.

ಇಂದು ನಗರದ ಬಲರಾಮ ಗೇಟ್ ಮುಂಭಾಗದ ಮೂರು ವೃತ್ತಗಳಲ್ಲಿ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್, ನಗರ ಪಾಲಿಕೆ ಮೇಯರ್ ಎಂ.ಜೆ ರವಿಕುಮಾರ್ ಸೇರಿದಂತೆ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ಸ್ವಚ್ಛ ಸರ್ವೇಕ್ಷಣಾ 2018 ಜಾಗೃತಿ ಕಾರ್ಯಕ್ರಮದಲ್ಲಿ ಶ್ರಮದಾನ ನಡೆಸಿದರು.

15 ದಿನಗಳ ಕಾಲ ಸಾರ್ವಜನಿಕ ಸ್ಥಳಗಳಾದ ಗ್ರಾಮಾಂತರ ಬಸ್ ನಿಲ್ದಾಣ, ಕೆಆರ್ ಆಸ್ಪತ್ರೆ ಆವರಣ, ಜಿಲ್ಲಾ ನ್ಯಾಯಾಲಯ, ಕೆ.ಆರ್ ಸರ್ಕಲ್ ಮುಂತಾದ ಕಡೆಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಎರಡು ಬಾರಿ ಸ್ವಚ್ಛ ನಗರಿ ಪಟ್ಟ ಅಲಂಕರಿಸಿದ್ದ ಮೈಸೂರು ನಗರವನ್ನು ಮತ್ತೊಮ್ಮೆ ಸ್ಥಾನಮಾನ ಕಲ್ಪಿಸಲು ಈ ಮೂಲಕ ವಿಶೇಷ ಪ್ರಯತ್ನ ಮಾಡಲಾಗುತ್ತಿದೆ.

Related Articles

Leave a comment

Back to Top

© 2015 - 2017. All Rights Reserved.