ಕಸದರಾಶಿ ಮಧ್ಯೆ ಹತ್ತಾರು ತಲೆಬುರುಡೆ ನೋಡಿ ಬೆಚ್ಚಿಬಿದ್ದ ಜನ

BREAKING NEWS, Kannada News, Regional, Top News No Comments on ಕಸದರಾಶಿ ಮಧ್ಯೆ ಹತ್ತಾರು ತಲೆಬುರುಡೆ ನೋಡಿ ಬೆಚ್ಚಿಬಿದ್ದ ಜನ 23

ಮೈಸೂರು: ನಗರದಲ್ಲಿ ಕಸದ ರಾಶಿ ಮಧ್ಯೆ ಹತ್ತಾರು ತಲೆಬುರುಡೆಗಳು ಪತ್ತೆಯಾಗಿದ್ದು ಸ್ಥಳಿಯ ನಾಗರಿಕರು ಬೆಚ್ಚಿಬಿದ್ದಿದ್ದಾರೆ.

ನಗರದ ವಿಜಯನಗರದ ಎರಡನೇ‌ ಹಂತದಲ್ಲಿರುವ ಚಿಕ್ಕಮ್ಮಾ ಶಾಲೆಯ ಬಳಿ ಈ ತಲೆ ಬುರುಡೆಗಳು ಪತ್ತೆಯಾಗಿವೆ. ಒಮ್ಮೆಲೆ ಹತ್ತಾರು ತಲೆಬುರುಡೆ ನೋಡಿದ ಸ್ಥಳೀಯರು ಆತಂಕಗೊಂಡಿದ್ದಾರೆ. ಯಾರೋ ಬುರುಡೆಗಳನ್ನು ಚೀಲದಲ್ಲಿ ತುಂಬಿ ಇಲ್ಲಿ ಬಿಸಾಡಿ ಹೋಗಿದ್ದಾರೆ.

ಇನ್ನು ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವಿಜಯನಗರ ಪೊಲೀಸರು ತಪಾಸಣೆ ನಡೆಸಿ ಹೊಲಗಳಲ್ಲಿ ಮನೆಕಟ್ಟಲು ಪಾಯ ತೆಗೆಯುವ ವೇಳೆ ಸಿಕ್ಕಿರಬಹುದು. ಅದನ್ನು ಇಲ್ಲಿ ತಂದು ಬಿಸಾಡಿಹೋಗಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.