ಪ್ರೀತಿಯ ನಾಯಿಗೆ ತಿಥಿ ಮಾಡಿ ಮಾನವೀಯತೆ ಮೆರೆದ ಜನ

BREAKING NEWS, Kannada News, Regional, Top News No Comments on ಪ್ರೀತಿಯ ನಾಯಿಗೆ ತಿಥಿ ಮಾಡಿ ಮಾನವೀಯತೆ ಮೆರೆದ ಜನ 37

ಹಾಸನ: ಗ್ರಾಮಕ್ಕೆ ಕಾವಲಾಗಿದ್ದ ಹಾಗೂ ಎಲ್ಲರ ಪ್ರೀತಿ ಪಾತ್ರವಾಗಿದ್ದ ನಾಯಿ ಕೆಂಪ. ಆದರೆ ಅನಾರೋಗ್ಯದಿಂದ ಕೆಂಪಾ ಪ್ರಾಣಬಿಟ್ಟಿದ್ದ. ಇಡೀ ಗ್ರಾಮದ ಜನರಿಗೆ ಆ ಸಾವು ನೋವು ತರಿಸಿತ್ತು. ಎಲ್ಲರ ಪ್ರೀತಿ ಪಾತ್ರನಾಗಿದ್ದ ನಾಯಿಗೆ ತಮ್ಮ ಜಮೀನಿನಲ್ಲೆ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ ಹಾಸನದ ಜನರು.

ಹೌದು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಗ್ಗೆರೆ ಗ್ರಾಮದಲ್ಲಿ ಗ್ರಾಮಸ್ಥರು ನಾಯಿ ಸಮಾಧಿಗೆ ಹಾಲು ತುಪ್ಪ ಅರ್ಪಿಸಿ, ತಿಥಿ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕಗ್ಗೆರೆ ಗ್ರಾಮದ ಚನ್ನೇಗೌಡ ಎಂಬುವರ ಮನೆಯಲ್ಲಿ ಬಹಳ ವರ್ಷಗಳಿಂದ ಇದ್ದ ಕೆಂಪಾ ಇಡೀ ಗ್ರಾಮದ ಪ್ರೀತಿಗೆ ಪಾತ್ರವಾಗಿತ್ತು. ಮೊನ್ನೆ ಸಂಕ್ರಾಂತಿ ಹಬ್ಬದ ದಿನದಂದು ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ. ಇದರಿಂದ ನೊಂದ ಗ್ರಾಮಸ್ಥರು ನಿನ್ನೆ ಕೆಂಪನನ್ನ ಮಣ್ಣು ಮಾಡಿದ ಸ್ಥಳದಲ್ಲಿ ಹಾಲು ತುಪ್ಪ ಬಿಟ್ಟಿದ್ದಾರೆ.

ಈ ವೇಳೆ ನೂರಕ್ಕೂ ಹೆಚ್ಚು ಮಂದಿ ಕೆಂಪನ ಸಮಾಧಿಗೆ ಪೂಜೆ ಸಲ್ಲಿಸಿ, ತಿಥಿಯೂಟವನ್ನ ಕೂಡ ಸೇವಿಸಿದ್ದು ವಿಶೇಷವಾಗಿತ್ತು.

Related Articles

Leave a comment

Back to Top

© 2015 - 2017. All Rights Reserved.