ಮಹಿಳಾ ಪಿಎಸ್.ಐ ಸಮವಸ್ತ್ರ ಎಳೆದು ಕಿರುಕುಳ

BREAKING NEWS, Crime, Kannada News, Regional No Comments on ಮಹಿಳಾ ಪಿಎಸ್.ಐ ಸಮವಸ್ತ್ರ ಎಳೆದು ಕಿರುಕುಳ 19

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಿಳಾ ಪೊಲೀಸರಿಗೆ ಸೂಕ್ತ ರಕ್ಷಣೆ ಇಲ್ಲ ಎಂಬಂತಾಗಿದೆ. ನೈಟ್ ರೌಂಡ್ಸ್​ನಲ್ಲಿದ್ದ ಲೇಡಿ ಪಿಎಸ್ಐ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ಹೌದು. ಜೀವನ್ ಭೀಮಾ ನಗರದ ಪಿಎಸ್​ಐ ಅಶ್ವಿನಿ ಅವರಿಗೆ ಕಿರುಕುಳ ನೀಡಿರುವ ಆರೋಪ ಈಗ ಕೇಳಿಬಂದಿದೆ. ಜನವರಿ 18ರಂದು ಬೆಳಗಿನ ಜಾವ 2.30ರ ಸುಮಾರಿಗೆ ಗಸ್ತಿನಲ್ಲಿದ್ದ ಸಿದ್ಧಪ್ಪ ಮತ್ತು ರವಿಕುಮಾರ್ ಎಂಬ ಪೊಲೀಸ್ ಪೇದೆಗಳು ನಾಲ್ವರು ಅನುಮಾನಾಸ್ಪದ ವ್ಯಕ್ತಿಗಳು ಚಾಕು ಹಿಡಿದು ತಿರುಗುತ್ತಿರುವುದನ್ನ ಗಮನಿಸುತ್ತಾರೆ. ಬಳಿಕ ಜೀವನ್ ಭೀಮಾನಗರದ ಲೇಡಿ ಪಿಎಸ್​ಐ ಅಶ್ವಿನಿಯವರಿಗೆ ಮಾಹಿತಿ ಕೊಡುತ್ತಾರೆ. ಈ ಸಂದರ್ಭ ಸ್ಥಳಕ್ಕೆ ತೆರಳಿದ ಪಿಎಸ್​ಐ ಜೊತೆ ನಾಲ್ವರೂ ಆರೋಪಿಗಳು ಅಸಭ್ಯವಾಗಿ ವರ್ತಿಸುತ್ತಾರೆ. ಮಹಿಳೆ ಎಂಬುದನ್ನೂ ಲೆಕ್ಕಿಸದೇ ಅಸಭ್ಯ ಪದಗಳನ್ನ ಬಳಸಿ ಬೈದಿದಲ್ಲದೇ ಸಮವಸ್ತ್ರ ಎಳೆದು ಕಿರುಕುಳ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ವಿಜಯಾನಂದ, ಚೇತು, ಸಚಿನ್, ಅಕಿಲ್ ಜೋಶ್ ಎಂಬುವರನ್ನು ಬಂಧಿಸಿ ಕೇಸ್ ದಾಖಲಿಸಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.