ನಟ ದುನಿಯಾ ವಿಜಯ್’ಗೆ ಇಂದು ಹುಟ್ಟುಹಬ್ಬದ ಸಂಭ್ರಮ: ಸ್ಮಶಾನದಲ್ಲಿ ಬರ್ತ್’ಡೇ ಆಚರಿಸಿದ ಅಭಿಮಾನಿಗಳು

BREAKING NEWS, Entertainment, Kannada News No Comments on ನಟ ದುನಿಯಾ ವಿಜಯ್’ಗೆ ಇಂದು ಹುಟ್ಟುಹಬ್ಬದ ಸಂಭ್ರಮ: ಸ್ಮಶಾನದಲ್ಲಿ ಬರ್ತ್’ಡೇ ಆಚರಿಸಿದ ಅಭಿಮಾನಿಗಳು 26

ಬೆಂಗಳೂರು: ನಟ ದುನಿಯಾ ವಿಜಯ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ನಿನ್ನೆ ಮಧ್ಯ ರಾತ್ರಿಯೇ ಹೊಸಕೆರೆ ಹಳ್ಳಿಯಲ್ಲಿ ಇರುವ ದುನಿಯಾ ವಿಜಿ ಮನೆ ಮುಂದೆ ಜಮಾಯಿಸಿದ ನೂರಾರು ಅಭಿಮಾನಿಗಳ ಜಯಘೋಷಗಳ ನಡುವೆ, ವಿಜಿ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. 44ನೇ ವಸಂತಕ್ಕೆ ಕಾಲಿರಿಸಿದ ನೆಚ್ಚಿನ ನಟನಿಗೆ ಅಭಿಮಾನಿಗಳು ಬರ್ತ್ ಡೇ ವಿಶ್ ತಿಳಿಸಿದ್ದಾರೆ.

ಇನ್ನು ದುನಿಯಾ ವಿಜಿ ದಾವಣಗೆರೆಯ ಐವರು ಅಭಿಮಾನಿಗಳು ಸೈಕಲ್ ಜಾಥಾ ಮೂಲಕ ಆಗಮಿಸಿದ್ದು ವಿಶೇಷವಾಗಿತ್ತು. ಇದೇ ತಿಂಗಳ 26 ಕ್ಕೆ ರಿಲೀಸ್ ಆಗ್ತಿರೋ ಕನಕ ಚಿತ್ರದ ಪ್ರಚಾರ ಹಾಗೂ ವಿಜಿಯವರಿಗೆ ವಿಶ್ ಮಾಡಲು ಬಂದಿರುವುದಾಗಿ ಅಭಿಮಾನಿಗಳು ತಿಳಿಸಿದರು. ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವುದಕ್ಕೆ ವಿಜಯ್ ಅಂತಸ ವ್ಯಕ್ತಪಡಿಸಿದರು.

ಇಷ್ಟೇ ಅಲ್ಲದೆ ಗದಗದ ಅಡವಿ ಸೋಮನಹಳ್ಳಿಯಲ್ಲಿ ಜಯಮ್ಮನ ಮಗ ವಿಜಯ್​ ಅಭಿಮಾನಿಗಳು ಮಧ್ಯರಾತ್ರಿ ಸ್ಮಶಾನದಲ್ಲಿ ಹುಟ್ಟುಹಬ್ಬ ಆಚರಿಸಿದರು. ಬ್ಲಾಕ್​ ಕೋಬ್ರಾ ಭಾವಚಿತ್ರದ ಎದುರು ಹೋಮ ಹವನ ಮಾಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.