ಕಾರಿನಲ್ಲಿ ತೆರಳುತ್ತಿದ್ದ ವೇಳೆ ಪೇಜಾವರ ಶ್ರೀಗಳಿಗೆ ಉಳುಕಿದ ಬೆನ್ನು: ವಿಶ್ರಾಂತಿ ಪಡೆಯುವಂತೆ ಸೂಚಿಸಿದ ವೈದ್ಯರು

BREAKING NEWS, Kannada News, Regional No Comments on ಕಾರಿನಲ್ಲಿ ತೆರಳುತ್ತಿದ್ದ ವೇಳೆ ಪೇಜಾವರ ಶ್ರೀಗಳಿಗೆ ಉಳುಕಿದ ಬೆನ್ನು: ವಿಶ್ರಾಂತಿ ಪಡೆಯುವಂತೆ ಸೂಚಿಸಿದ ವೈದ್ಯರು 18

ಉಡುಪಿ:  ಪೇಜಾವರ ಶ್ರೀಗಳು ನಿನ್ನೆ ಮಂತ್ರಾಲಯದಿಂದ ಹೈದರಾಬಾದ್’ಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಬೆನ್ನು ಉಳುಕಿ 15 ದಿನ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ.

ಬೆನ್ನುನೋವಿನಿಂದ ಬಳಲುತ್ತಿರುವ ಶ್ರೀಗಳನ್ನು ಎಲುಬು ಮತ್ತು ಕೀಲು ತಜ್ಞರು ತಪಾಸಣೆ ನಡೆಸಿದ್ದು, ಸಿಟಿ ಸ್ಕ್ಯಾನ್‌ಗೆ ಒಳಪಡಿಸಲಾಗಿದೆ. ನಂತರ 15 ದಿನ ವಿಶ್ರಾಂತಿ ಪಡೆಯಲು ಮತ್ತು ಸಂಚಾರ ನಡೆಸದಂತೆ ವೈದ್ಯರು ಸೂಚನೆ ನೀಡಿದ್ದಾರೆ.

ಜನವರಿ 17ರಂದು ಪರ್ಯಾಯ ಪೂರೈಸಿದ್ದರು. ಪರ್ಯಾಯದ ನಂತರವೂ ದಣಿವರಿಯದ ಸಂಚಾರದಲ್ಲಿ ತೊಡಗಿದ್ದ ಅವರು, ಸೋಂದ, ಗದಗ, ಮಂತ್ರಾಲಯಕ್ಕೆ ತೆರಳಿದ್ದರು. ಮಂತ್ರಾಲಯದಿಂದ ಹೈದರಾಬಾದ್‌ ಮಾರ್ಗದಲ್ಲಿ ಬೆನ್ನುನೋವು ಕಾಣಿಸಿಕೊಂಡಿತ್ತು. ಕರ್ನೂಲ್‌ನಲ್ಲಿ ಕಾರಿಗೆ ಬ್ರೇಕ್‌ ಹಾಕುವಾಗ ಬೆನ್ನಿನಲ್ಲಿ ಉಳುಕು ಕಾಣಿಸಿಕೊಂಡಿದ್ದರಿಂದ ವಿಮಾನದ ಮೂಲಕ ಸ್ವಾಮೀಜಿ ವಾಪಸಾಗಿದ್ದರು.

 

Related Articles

Leave a comment

Back to Top

© 2015 - 2017. All Rights Reserved.