AAP ಪಕ್ಷಕ್ಕೆ ಶಾಕ್ ನೀಡಿದ ವಕೀಲನ್ಯಾರು ಗೊತ್ತಾ..! ಈ ಒಂದು ಪುಸ್ತಕ 20 ಶಾಸಕರ ಅನರ್ಹಕ್ಕೆ ಕಾರಣವಾಯ್ತು..!

Featured, Kannada News, Regional, Top News No Comments on AAP ಪಕ್ಷಕ್ಕೆ ಶಾಕ್ ನೀಡಿದ ವಕೀಲನ್ಯಾರು ಗೊತ್ತಾ..! ಈ ಒಂದು ಪುಸ್ತಕ 20 ಶಾಸಕರ ಅನರ್ಹಕ್ಕೆ ಕಾರಣವಾಯ್ತು..! 26

ನವದೆಹಲಿ: ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ AAP ಪಕ್ಷಕ್ಕೆ ಶಾಕ್ ನೀಡಿರುವ ಚುನಾವಣಾ ಆಯೋಗ ಲಾಭದಾಯ ಹುದ್ದೆ ಹೊಂದಿದ್ದ ಪಕ್ಷದ 20 ಶಾಸಕರನ್ನು ಅನರ್ಹರೆಂದು ಘೋಷಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡಿದೆ. ಆಪ್​ನ ಈ ಪರಿಸ್ಥಿತಿಗೆ ಕಾರಣವಾದ ಆ ವಕೀಲನ್ಯಾರು ಎಂದು ನಿಮಗೆ ಗೊತ್ತಾ..? ಅವರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ

AAP ಪಕ್ಷದ 20 ಶಾಸಕರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಯುವ ವಕೀಲನ ಹೆಸರು ಪ್ರಶಾಂತ್ ಪಟೇಲ್. 30 ವರ್ಷದ ಪ್ರಶಾಂತ್ 2015ರಲ್ಲಿ ತಮ್ಮ ವಕೀಲ ವೃತ್ತಿ ಆರಂಭಿಸಿದ್ದರು. 2015ರ ಸಪ್ಟೆಂಬರ್​ನಲ್ಲಿ ರಾಷ್ಟ್ರಪತಿ ಸಮ್ಮುಖದಲ್ಲಿ ಶಾಸಕರ ಅಕ್ರಮ ನೇಮಕವನ್ನು ಪ್ರಶ್ನಿಸುವ ಮೂಲಕ ರಾತ್ರೋ ರಾತ್ರಿ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದವರು ಪಾಟೇಲ್.

ಪ್ರಶಾಂತ್ ಪಟೇಲ್​ ಅಲಹಾಬಾದ್​ ಯುನಿವರ್ಸಿಟಿಯಿಂದ ಬಿ.ಎಸ್ಸಿ ಪದವಿ ಪಡೆದು ನೋಯ್ಡಾದ ಕಾಲೇಜೊಂದರಲ್ಲಿ ಎಲ್​ಎಲ್​ಬಿ ವ್ಯಾಸಂಗ ಮಾಡಿದ್ದಾರೆ. ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ವಯ ಪ್ರಶಾಂತ್ ಪಟೇಲ್​ ಹಿಂದೂ ಲೀಗಲ್​ ಸೆಲ್​ನ ಸದಸ್ಯರಾಗಿದ್ದು, ಉತ್ತರ ಪ್ರದೇಶದ ಫತೇಪುರ್​ನ ನಿವಾಸಿ ಯಾಗಿದ್ದಾರೆ. ಪ್ರಶಾಂತ್ ಪಟೇಲ್​ ಅನ್ವಯ ಲೋಕಸಭೆ ಹಾಗೂ ದೆಹಲಿ ವಿಧಾನಸಭೆಯ ಮಾಜಿ ಸಚಿವ ಎಸ್​ ಕೆ ಶರ್ಮಾರವರ ‘(ದಿಲ್ಲಿ ಸರ್ಕಾರ್ ಕೀ ಶಕ್ತಿಯಾಂ ಔರ್ ಸೀಮಾಯೆಂ’) ಎಂಬ ಪುಸ್ತಕ ಓದಿದ ಬಳಿಕವಷ್ಟೇ ಸಿಎಂ ಕೇಜ್ರಿವಾಲ್ ತನ್ನ 21 ಶಾಸಕರನ್ನು ಅಸಂವಿಧಾನಿಕವಾಗಿ ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿದ್ದರೆಂದು ತಿಳಿದಿದ್ದಂತೆ.

ಬಳಿಕ ಪುಸ್ತಕ ಬರೆದ ಲೇಖಕರನ್ನು ಭೇಟಿಯಾದ ಪ್ರಶಾಂತ್ ಪಟೇಲ್ ಇಡೀ ವಿಚಾರವನ್ನು ತಿಳಿದುಕೊಂಡಿದ್ದಾರೆ. ತದ ನಂತರ ಈ ಎಲ್ಲಾ 21 ಶಾಸಕರ ವಿರುದ್ಧ ರಾಷ್ಟ್ರಪತಿಗೆ ದೂರು ನೀಡಿದ್ದರು. ಈ ಬೆಳವಣಿಗೆಗಳಾದ ಎರಡು ವರ್ಷಗಳ ಬಳಿಕ ಚುನಾವಣಾ ಆಯೋಗವು ಈ ಶಾಸಕರನ್ನು ಅನರ್ಹಗೊಳಿಸುವಂತೆ ಶಿಫಾರಸು ಮಾಡಿದೆ.

ಅಲ್ಲದೆ ಇದಕ್ಕೂ ಮೊದಲು PK ಸಿನಿಮಾದಲ್ಲಿ ಹಿಂದೂ ದೇವಿಯನ್ನು ತಪ್ಪಾಗಿ ಚಿತ್ರಿಸಿದ್ದಾರೆ ಎಂದು ಆರೋಪಿಸಿ ಬಾಲಿವುಡ್​ ಸ್ಟಾರ್​ ಅಮೀರ್​ ಖಾನ್ ಹಾಗೂ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ವಿರುದ್ಧ ಎಫ್​ಐಆರ್​ ದಾಖಲಿಸಿದ್ದರು.

Related Articles

Leave a comment

Back to Top

© 2015 - 2017. All Rights Reserved.